ಎದೆಯ ಪದ ಹಾಯುವಲ್ಲಿ …

ಹಸಿರೆಲೆಯು ಚಿಗುರುತಿದೆ
ಮತ್ತೆ ಚೈತ್ರದ ಬೆಳಕು
ನಿಂತ ನಿಲುನೆಲವು ನವ್ಯ
ಹೊಸತಾಗಿ ಹರಿಯುತಿದೆ
ಹಳೆಯ ಮಂದಾಕಿನಿಯು
ನಿನ್ನೆದೆಗಡಲದರ ಗಮ್ಯ.

ಮರಳ ತೀರದಿ ಶಬ್ದ
ಸ್ಥಬ್ದವಾದಷ್ಟೇ ಹೊತ್ತು
ಮೌನದಲಿ ಉಸಿರೆಲ್ಲ ದನಿಯುಸುರಿದ್ದು
ದೀಪಸಾಲಿನ ಸ್ಥಂಭ
ಬೆಳಗಲಣಿಯಾದಷ್ಟೇ ಹೊತ್ತು
ಹೆಗಲಿನಲಿ ಜಗದ ಅಲೆ ನಗುವತೇಲಿದ್ದು

ಹಾದಿಹಾದಿಗಳಿಗೆಲ್ಲ
ನಕ್ಷತ್ರ ಕಾವಲುಂಟು
ರಿಂಗಣಿಸುವುದದೇಕೆ
ಮತ್ತೆ ಮೌನ!
ರಿಂಗಣಿಸದಿರದೇಕೆ
ಮತ್ತೆ ಮೌನ!?

ಹಗಲುಗಣ್ಣಲಿ ಇನ್ನೊಂದಿಷ್ಟಿರುಳು
ಕಳೆದೇ ಹೋಗಲಿ
ಹರಿದಾದರೂ ನಿನ್ನ ನಾ ತಲುಪುವೆನು;
ಚಕ್ರ ಕಟ್ಟಾಗಿದೆ
ರೆಕ್ಕೆ ಬಿಚ್ಚುವುದೊಂದೇ ಬಾಕಿ
ಈಗಾದರೂ ನಾ ಮುಂದೆ ಹಾಯಬೇಕು
ಇಲ್ಲವಾದರೆ ಮತ್ತೆ ಕಾಯಬೇಕು?

ಹಸಿರೆಲೆಯು ಚಿಗುರುತಿದೆ
ಮತ್ತೆ ಚೈತ್ರದ ಬೆಳಕು…

– ರಾಘವೇಂದ್ರ ಹೆಗಡೆ

***

ಸರ್ವರಿಗೂ ‘ವಿಜಯ’ಸಂವತ್ಸರ ಸನ್ಮಂಗಲವನ್ನುಂಟುಮಾಡಲಿ.
ರಾ ಗ ನೌ ಕೆ‘ಯ ಓದುಗರಿಗೆಲ್ಲ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು :)
|| ಹರೇ ರಾಮ ||

– ರಾಘವೇಂದ್ರ ಹೆಗಡೆ

***

About these ads

About ರಾಘವೇಂದ್ರ ಹೆಗಡೆ

Kannadiga, Engineer, Passionate Poet/ Writer, Photographer, Nature lover etc... iBlogs @ http://raganouke.wordpress.com

Posted on 10/04/2013, in ವಿಶೇಷ, ಹನಿಹರವು (ಕವಿತೆ) and tagged , , , , , , , , , , , , , , . Bookmark the permalink. 4 Comments.

  1. ಬದರಿನಾಥ ಪಳವಳ್ಳಿಯ ಕವನಗಳು

    ನವೋದಯ ನವ್ಯಗಳ ಮಿಳಿತದಲಿ ಉಗಾದಿಯ ಸ್ವಾಗತ ಗೀತೆ.
    “ಚಕ್ರ ಕಟ್ಟಾಗಿದೆ
    ರೆಕ್ಕೆ ಬಿಚ್ಚುವುದೊಂದೇ ಬಾಕಿ”
    ಬದುಕು ತೆರೆಯಲಿ ಹೀಗೆ…

    http://badari-poems.blogspot.in/

    Like

    • ತಮ್ಮ ಹಾರೈಕೆಗೆ, ಪ್ರೋತ್ಸಾಹಕ್ಕೆ ನಾನು ಸದಾ ಕೃತಜ್ಞ ಬದರಿನಾಥ್ ಸರ್.. ಆತ್ಮೀಯ ಸ್ವಾಗತ ತಮಗೆ. ಬರುತ್ತಿರಿ. ತಮ್ಮ ಅತ್ಯಮೂಲ್ಯ ಸಲಹೆಗಳನ್ನು ನೀಡುತ್ತಿರಿ.. :)

      Like

  2. ಹಗಲುಗಣ್ಣಲಿ ಇನ್ನೊಂದಿಷ್ಟಿರುಳು
    ಕಳೆದೇ ಹೋಗಲಿ
    ಹರಿದಾದರೂ ನಿನ್ನ ನಾ ತಲುಪುವೆನು;
    ಚಕ್ರ ಕಟ್ಟಾಗಿದೆ
    ರೆಕ್ಕೆ ಬಿಚ್ಚುವುದೊಂದೇ ಬಾಕಿ
    ಈಗಾದರೂ ನಾ ಮುಂದೆ ಹಾಯಬೇಕು
    ಇಲ್ಲವಾದರೆ ಮತ್ತೆ ಕಾಯಬೇಕು?

    nice lines…keep going

    Like

ಹೇಗಿದೆ ಹೇಳಿ!

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Follow

Get every new post delivered to your Inbox.

Join 139 other followers