ನಿರಾಳ

ಮಬ್ಬುಗತ್ತಲ ತೆರೆಯ ಸರಿಸುತ
ಕೈ ಹಿಡಿದು ಮುನ್ನಡೆಸುತ
ಮರಗಟ್ಟಿದ ಮನದಿ ಮನೆಕಟ್ಟಿದ ಆತಂಕವ
ಅಂಕಿಯಲ್ಲೆ ಅರೆದು ಹಾಕುತ
ನಾಳಿನ ನಂಬಿಕೆಗೆ ಅಡಿಪಾಯವನಿಡುತ
ಮುನ್ನಡೆಸುತ ಬಂದ ಕಾಲವೇ ನಿನಗೆ ಪ್ರಣಾಮ.


ಮಂಕು ಕವಿದ ಕಣ್ಣ ಮಂಜು-ಧಾರೆಯ ಒರೆಸಿ
ಮುಗಿಲ ಮಾಲೆಗೆ ಬಣ್ಣಬಣ್ಣದ ಉಡುಗೆಯ ತೊಡಿಸಿ
ನೀಲ ಗಗನದ ಮಡಿಲಲಿ ನೂರುಸಾಲಲಿ ಹಾರುತ
ಗುರಿಯ ಸಾಧನೆಗೆ ಗರಿಯ ಹಚ್ಚುತ
ಹುರಿದುಂಬುತಿಹ ಕಾಲವೇ
ನಿನಗೆ ಪ್ರಣಾಮ.


ಇಳೆಯ ಒಡಲಲಿ ಜೀವದ ಕಣಜವ ಇರಿಸಿ
ಮರಳುಗಾಡಲು ಚಿಲುಮೆ ಒರತೆಯ ಹನಿಸಿ
ಜೀವರಕ್ಷಕ ಪ್ರಾಣ ವಾಯುವ ಬಡಿಸಿ
ಶಕ್ತಿ ಸ್ಪೂರ್ತಿಯ ತುಂಬುತ
ನಿರಾಳತೆಯ ಹರಸುತಿಹ
ಕಾಲವೇ ನಿನಗೆ ಪ್ರಣಾಮ.


ರಂಗೆ ಇರದ ಸರೋವರಕು ಮೋಡದ ರಂಗನೆರಚಿ,
ನಗುತ ಕಣ್ಮನ ಸೆಳೆವ ಸ್ಪೂರ್ತಿ ತಾವರೆಯ ಅದರೊಳು ಬೆಳೆಸಿ,
ನೂರು ಚಿಂತೆಯ ಅಲೆಗೆ ಸಿಲುಕಿ ನುಚ್ಚು ನೂರಗುತಿಹ ಮನಕೆ
ಅಕ್ಕರೆಯಿಂದ ಸಾಂತ್ವನಿಸುತ, ಬೇಸರವ ಅಳಿಸುತ
ಬದುಕ ನಂಬಿಕೆಯ ಮತ್ತೆ ಮತ್ತೆ ಉಳಿಸುತ
ಕಣ್ಣೆದುರ ಜಗದಿ ಅರಳಿ ಮಿನುಗಿ ಮಿನುಗಿ
ಮರೆಯಾಗುತಿಹ ಕಾಲವೇ ನಿನಗೆ ಪ್ರಣಾಮ.

ರಚನೆ–ರಾಘವೇಂದ್ರ ಹೆಗಡೆ .

Advertisements

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 05/02/2010, in ಹನಿಹರವು (ಕವಿತೆ). Bookmark the permalink. 2 ಟಿಪ್ಪಣಿಗಳು.

ಹೇಗಿದೆ ಹೇಳಿ!

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s