ಉಸಿರ ಕವಿತೆ..?

ಭಾವ ಕುಸುಮದಿ ಅರಳಿ
ಉಸಿರಿನೆಸರ ಧೂಳಿನಂತೆ
ಮೂರಕ್ಷರ ರೂಪದಿ
ಬರುತಲಿದ್ದ ಕವಿತೆ
ನಾ ಕರೆದರೂ
ಇಂದೇಕೆ ಬಾರದೆ ನೀ ಅವಿತೆ….?

ನಸುನಗುತ್ತ ಹೊಮ್ಮುತಿದ್ದ
ನಿನ್ನ ಬೆಡಗು
ಬರೆಯ ಹೊರಟ ನಾನು ಸೋತೆ
ಅದೆಂತ ಬೆರಗು..!
ನಕ್ಕಂತೆ ಗೇಲಿಮಾಡಿ
ಸಾಗಿಬಿಡುವ ನೀನು
ಒಮ್ಮೆಯಾದರೂ ಪದದೊಡೆ
ಅವತರಿಸಿ ನನ್ನೆಡೆ ನೋಡಬಾರದೇಕೆ..?

ಅಂತೂ ಆದೆ ನೀನು
ಇಂದು ಜನ್ಮತಾಳಿ
ಉಸಿರ ನೀಡುವಂತೆ ಆಗು
ಇಲ್ಲಿ ಬಂದು ಬಾಳಿ
ಮತ್ತೆ ಮತ್ತೆ ಕರೆಯಲಾರೆ
ಮಾಡುತ ಹೀಗೆ ಒತ್ತಾಯವನ್ನ
ಮರೆತು ಹಾಕಿರೂ ನೀ
ಅಡಗಿಸಿಡುವೆ ನಿನ್ನ ಪದಗಳಲ್ಲಿ ನನ್ನ ಉಸಿರನ್ನ..

— ರಾಘವೇಂದ್ರ ಹೆಗಡೆ

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 24/03/2010, in ಹನಿಹರವು (ಕವಿತೆ). Bookmark the permalink. 8 Comments.

  1. Pavan@Kannada

    ಈ ಉಸಿರ ಕವಿತೆಯು ಉಸಿರು ಹೋದರೂ ಹ್ರದಯದಲ್ಲಿ ಹಾಯಾಗಿ ಇರುವಂತದ್ದು.
    ಮುಂದುವರಿಸು………..

    Like

  2. ಸಂಕೇತ್

    ತುಂಬಾ ಒಳ್ಳೆಯ ಕವಿತೆ . ನನಗೆ ಬಹಳ ಇಷ್ಟ ಆಯಿತು .

    Like

  3. ರಾಘವೇಂದ್ರ ಅವರೆ,
    ಸರಳ ಹಾಗು ಸುಂದರವಾದ ಕವಿತೆ.
    “ಮರೆತು ಹಾಕಿರೂ ನೀ” ಸಾಲಿನ ಅರ್ಥ “ಮರೆತು ಹೊದರೂ ನೀ” ಎಂದಲ್ಲವೆ.
    -ಬಾಲ

    Like

    • ಬಾಲಕೃಷ್ಣ ಅವರಿಗೆ ಆತ್ಮೀಯ ನಮಸ್ಕಾರಗಳು.
      ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
      ‘ಮರೆತು ಹಾಕಿರೂ ನೀ’ ಅಂದರೆ ‘ನೀನು ನನ್ನನ್ನು ಮರೆತು ಹಾಕಿದರೂ’ ಎಂಬರ್ಥದಲ್ಲಿ ಬರೆದಿದ್ದೇನೆ.

      ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.

      Like

  4. ಸುಂದರ ಕವಿತೆ,
    ನಿಮ್ಮ ಸರಳ ಸುಂದರ ಕವಿತೆ ಗೆ ನಾ ಸೋತೆ

    Like

ಹೇಗಿದೆ ಹೇಳಿ!

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s