ಕಥೆ ಹೇಳುವ ಸಾಲುಗಳು.

೧. ಓದಲು ಬೆಳಕಿಲ್ಲ ಎಂದು ಅಸಡ್ಡೆಯಿಂದ ಕೈ ಕುಡುಗಿದ, ಪಕ್ಕದಲ್ಲಿದ್ದ ಚಿಮಣಿ ಬಿದ್ದು ಪುಸ್ತಕ ಸುಟ್ಟುಹೋಯಿತು!

೨. ನೀರಿಗೆ ಹೆದರಿ ನದಿಯೆಡೆ ನೋಡದೆ ಪ್ರತಿದಿನ ೨೦ ಕಿ.ಮಿ. ಸುತ್ತಿ ತಡವಾಗಿ ಹೋಗುತ್ತಾ ಕೆಲಸ ಕಳೆದುಕೊಂಡ. ನದಿ ಬತ್ತಿ ಅದಾಗಲೇ ಒಂದು ತಿಂಗಳಾಗಿತ್ತು!

೩. ಅವರೆಲ್ಲ ಆಕಾಶವ ಮುಟ್ಟುವಂತೆ ಗಾಳಿಪಟವ ಹಾರಿ ಬಿಡುತ್ತಿದ್ದರು. ದಾರದ ಬಂಡಲ್ಲು ಖಾಲಿಯಾಗಿ ಖೇದದಿಂದ ಆತ ಮನೆಗೆ ನಡೆದುಬಿಟ್ಟ.

೪. ತಾನೂ ವನ್ಯಪ್ರಪಂಚದ ಫೋಟೋಗ್ರಾಫರ್ ಆಗಬೇಕೆಂದು ಗಂಧದ ಮರಕ್ಕೆ ಕ್ಯಾಮರ ಕಟ್ಟಿಟ್ಟಿದ್ದ. ಸ್ವಲ್ಪ ಹೊತ್ತಿ ಬಿಟ್ಟು ಬರುವಷ್ಟರಲ್ಲಿ ಆ ಮರವೇ ಅಲ್ಲಿರಲಿಲ್ಲ!

೫. ಜಾಹೀರಾತಿನಲ್ಲಿ ಬರುವಾಕೆಯಂತೆ ತಾನೂ ಕಾಣಬೇಕೆಂದು ಫೇರ್ನೆಸ್ ಕ್ರೀಂ ಮೆತ್ತಿಕೊಳ್ಳುತ್ತಿದ್ದಳು. ಕನ್ನಡಿ ನೋಡಿ ತನಗೆ ಯಾವುದೋ ರೋಗ ಬಂದಿದೆಯೆಂದು ತಟ್ಟನೆ ಕುಸಿದು ಬಿದ್ದಳು!

೬. ಶರಾವತಿ ಸೇತುವೆ ಮೇಲೆ ಶರವೇಗದಲ್ಲಿ ರೈಲು ಸಾಗುತ್ತಿತ್ತು. ಆ ವೇಗವನ್ನೂ ಮೀರಿ ಜಾರಿದ ನೆನೆಪುಗಳು ಆಕೆಯ ಕಣ್ಗಳಿಂದ ನೀರನ್ನು ಬಸಿಸಿದ್ದವು!

** ರಾಘವೇಂದ್ರ ಹೆಗಡೆ.

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 02/06/2010, in ಹನಿಗತೆ. Bookmark the permalink. 7 ಟಿಪ್ಪಣಿಗಳು.

  1. ಶರಶ್ಚಂದ್ರ ಕಲ್ಮನೆ

    ಚಂದದ ಸಾಲುಗಳು ರಾಘವೇಂದ್ರ ಅವರೇ… 🙂 “ಶರಾವತಿ ಸೇತುವೆ ಮೇಲೆ ಶರವೇಗದಲ್ಲಿ ರೈಲು ಸಾಗುತ್ತಿತ್ತು. ಆ ವೇಗವನ್ನೂ ಮೀರಿ ಜಾರಿದ ನೆನೆಪುಗಳು ಆಕೆಯ ಕಣ್ಗಳಿಂದ ನೀರನ್ನು ಬಸಿಸಿದ್ದವು!” ತುಂಬಾ ಇಷ್ಟವಾಯಿತು

    Like

  2. ರಾಗನೌಕೆಯಲ್ಲಿ ಸಣ್ಣಕಥೆ ಸರಕು ತುಂಬಾ ಚೆನ್ನಾಗಿದೆ. ನೌಕೆ ದಡ ಸೇರುವ ಮುಂಚೆ ಇಂಥಹ ವಿಬಿನ್ನವಾದಂಥಹ ಮತ್ತಷ್ಟು ಸರಕನ್ನ ತರಲಿ.
    ಸಣ್ಣಕಥೆಯ ಮೂಲಕ ದೊಡ್ಡದಾದ ಅನುಭವ ಕೊಟ್ಟಿದ್ದಕ್ಕೆ ಧನ್ಯಾವಾದಗಳು.

    Like

  3. neenu kalavida kanlla maga……

    Like

  4. ರಾಘವೇಂದ್ರ…

    ನಿಮ್ಮ ಬ್ಲಾಗ್ ಬಹಳ ಸುಂದರವಾಗಿದೆ…
    ವಿಷಯಗಳೂ ಕೂಡ…

    “ಶರಾವತಿಯ ನದಿಯ ಸೇತುವೆಯ ಮೇಲೆ…”
    ಸಾಲುಗಳು ಸೂಪರ್.. !

    ಹೃತ್ಪೂರ್ವಕ ಅಭಿನಂದನೆಗಳು…

    Like

  5. @ ಪವನ್
    ನಿಮ್ಮ ಪ್ರತಿಕ್ರಿಯೆಯೇ ನನ್ನ ಅನೇಕ ಬರಹಗಳಿಗೆ ಪ್ರೇರಣೆ.
    ನನ್ನ ಬರಹವನ್ನು ಓದುತ್ತಿರುವುದಕ್ಕೆ, ಪ್ರತಿಕ್ರಿಯೆ ನೀಡುತ್ತಿರುವುದಕ್ಕೆ ಅನಂತಾನಂತ ಧನ್ಯವಾದಗಳು.

    @ Deepak kolke
    ನನ್ ಬ್ಲಾಗ್ ನೋಡಿದ್ದಕ್ಕೆ thanks deepak..

    Like

ಹೇಗಿದೆ ಹೇಳಿ!