ಮನದಂಗಳಕೆ ಅಪ್ಪಳಿಸುವ ನೂರಾರು ಅಲೆಗಳು….
ಮನದಂಗಳದಿ ಅಂಗಾತ ಮಲಗಿದ ಚಿಂತೆ
ನೀನೇಕೆ ಆಗಾಗ ಅಣಕುತ ನೋಯಿಸುವೆ..?
ಹೃದಯದಂಗಳದಿ ದಂಗು ಬಡಿಸಿದ ಚಿಂತೆ
ನೀನೇಕೆ ಮತ್ತೆ ಕಂಪುತ ಕಾಡಿಸುವೆ…?
ದಿನ, ಕ್ಷಣ, ಮನ -ಘನ ಚಿಂತನೆಯ ತೊರೆದು
ಅದೇಕೋ ಮತ್ತೆ-ಮತ್ತೆ ಕೊರಗನು ಆಹ್ವಾನಿಸಿದೆ..
ಕಾಣದೆ, ಕೇಳದೆ, ಇರದೆಯೂ ಇರುತಲೇ
ದ್ವಂದ್ವ ಒಮ್ಮಿಂದೊಮ್ಮೆಲೆ ಬಿಗಡಾಯಿಸಿದೆ..!
ಮಳೆಗಾಲವೂ ಈ ಮನಕೆ ಅದೇಕೋ ಬರಗಾಲವು!
ಆಂತರ್ಯ ಹನಿಸುವ ಜಿನುಗಿನ್ನೆಲ್ಲಿದೆ..?
ಎಲ್ಲ ಯೋಚನೆಯೂ ಮಿಂಚಂತೆ ಹೊಳೆದು ಮರೆಯಾದರೆ
ಸ್ಥಿರತೆಗೆ ಒರತೆಯ ಕುರುಹು ಮತ್ತೆಲ್ಲಿದೆ…!
ಈ ಬದುಕಿನಲ್ಲೆಲ್ಲ ಕ್ಷಣಿಕ ಎಂದು
ಮಾರ್ದನಿಸುವ ಕನವರಿಕೆ ಸಧೃಢತೆಯ ಹಾರೈಸೀತೇ…?
ಬರುವ ನಾಳೆಯ ಭರವಸೆಯ ಉಳಿಸುತ
ಕ್ಷಣ-ಕ್ಷಣದ ಅರ್ಥದ ಬಗ್ಗೆ ಎಚ್ಚರಿಸೀತೇ….?!
— ರಾಘವೇಂದ್ರ ಹೆಗಡೆ
(ಚಿತ್ರಕೃಪೆ: http://www.thankyouviggo.com/photos/)
Posted on 14/06/2010, in ಹನಿಹರವು (ಕವಿತೆ). Bookmark the permalink. 4 ಟಿಪ್ಪಣಿಗಳು.
ಈ ಬದುಕಿನಲ್ಲೆಲ್ಲ ಕ್ಷಣಿಕ ಎಂದು
ಮಾರ್ದನಿಸುವ ಕನವರಿಕೆ ಸಧೃಢತೆಯ ಹಾರೈಸೀತೇ…?
ಬರುವ ನಾಳೆಯ ಭರವಸೆಯ ಉಳಿಸುತ
ಕ್ಷಣ-ಕ್ಷಣದ ಅರ್ಥದ ಬಗ್ಗೆ ಎಚ್ಚರಿಸೀತೇ….?!
tumbaa ishtavaada saalugalivu
chennagide
LikeLike
ಪ್ರಾರ೦ಭದಲ್ಲಿ ನಿರಾಶಾ ಭಾವ ಮಡುಗಟ್ಟಿದ್ದರೂ ಅ೦ತ್ಯದಲ್ಲಿ ಆಶಾ ಕಿರಣ ಮೂಡಿದ ಸುಳಿವಿದೆ. ಕವನ ಚೆನ್ನಾಗಿದೆ.
ನನ್ನ ಬ್ಲಾಗ್ ಗೊಮ್ಮೆ ಭೇಟಿ ನೀಡಿ.
LikeLike
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಖಂಡಿತ ತಮ್ಮ ಬ್ಲಾಗಿಗೆ ಬರುತ್ತೇನೆ.
LikeLike
sundara chitradondige arthapoorna chendada kavana..
LikeLike