ಮುಖವಾಡದ ಹಿಂದೆ..

ಕಣ್ಣೋಟದ ತಪ್ಪಲಿನ ಹಸಿರ ಹಾಸಿನ ಆಚೆ
ಗೀಚಿರುವ ಲೆಕ್ಕಗಳ ಹರಿದ ಹಾಳೆಯ ಎಸೆದು
ತೋರ್ಪಡಿಕೆಗೆ ಮುಗುಳ್ನಗುವ ಮುಖಕೆ ಲೇಪಿಸಿ
ಇರದ ನಲಿವನು ಇರುವಂತೆ ಉಸುರುತ
ನೋವು, ಹತಾಷೆಗಳನೆಲ್ಲ ತುಟಿಕಚ್ಚಿ ನುಂಗಿ
ಹಾಯಾಗಿರುವಂತೆ ಹೇಳಿ ಮೌನದಿ
ಕಂಬನಿಸುತ್ತಿದೆಯ ನಿನ್ನ ಮನ ಮುಖವಾಡದ ಹಿಂದೆ..!

ಒಂದೊಮ್ಮೆ ಮುಗಿಲ ನೋಡಿ
ಮಗದೊಮ್ಮೆ ಬಯಲ ನೋಡಿ
ಅದೇನನೋ ತೊದಲುವ ನಿನ್ನ ಮನ..
ಕ್ಷಣಮಾತ್ರದಿ ಕಾಲದಿ ಹಿನ್ನಡೆದು,
ಮರುಕ್ಷಣದಿ ಮತ್ತೆಲ್ಲೋ ಮುನ್ನಡೆದು..
ಮೌನವನೆ ಕದಡಿ ಮಾತಾಡಿಸುತ
ಮನದುಂಬಿ ಬಾರದ ಮುಗುಳ್ನಗೆಯ
ಕೃತಕದಿ ಸೃಷ್ಟಿಸಿ ಬಿಕ್ಕಳಿಸುವುದು
ಅದೇಕೆ ಮುಖವಾಡದ ಹಿಂದೆ..!

ಕತ್ತಲೆಯ ಸಂತೆಯ ಮುಗಿಸಲು
ಸಾಲು ದೀಪಗಳ ಕನಸ ಕಂಡು
ಹಣತೆಯೊಂದನು ಹಚ್ಚಿ ಇಟ್ಟು
ದೂರದೂರಕೆ ಕೊಂಡೊಯ್ದು
ಬೆಳಕ ಪಸರಿಸುವಂತ ಸದ್ವಿಚಾರಗಳ
ನಡುವೆಯೇ ಎಣ್ಣೆ ಆರಬಹುದೆಂಬ
ಅಳುಕನು ಹೂತು ಮುನ್ನುಗ್ಗುವ
ಸದ್ಭಾವವಿದೆಯಲ್ಲ ನಿನ್ನ ಮನದಲ್ಲಿ..,
ಅದು ಬೆಳೆದು, ಹಣತೆಯ ಬೆಳಗುತ
ವಿಶ್ವ ವ್ಯಾಪಿಸುತ ನಿರಂತರವಾಗಲಿ
ಮುಖವಾಡದ ಹಿಂದೆ – ಮುಂದೆ….!

— ರಾಘವೇಂದ್ರ ಹೆಗಡೆ

Advertisements

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 22/07/2010, in ಹನಿಹರವು (ಕವಿತೆ). Bookmark the permalink. 5 ಟಿಪ್ಪಣಿಗಳು.

 1. ಬೆಳ್ಳಾಲ ಗೋಪಿನಾಥ ರಾವ್

  ತುಂಬಾ ಚೆನ್ನಾಗಿದೆ ರಾಘವೇಂದ್ರ
  ನಿಮ್ಮ ಕವನ

  Like

 2. @ Shrikanth : Thanks ..

  @ ಬೆಳ್ಳಾಲ ಗೋಪಿನಾಥ ರಾವ್
  — ಧನ್ಯವಾದ ಸರ್ ತಮ್ಮ ಪ್ರತಿಕ್ರಿಯೆಗೆ..

  @ sanket and @ Raveesh KH

  Thank you so much for comming by……..

  Like

ಹೇಗಿದೆ ಹೇಳಿ!

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s