ಹನಿಯೊಡೆದ ಮಳೆಯಲಿ ಕೊಚ್ಚಿಹೋದ ಹನಿಗಳಿವು.!

ಅರಳಿ ಬಂದ ನಗುವ ಹಿಂದೆ
ಅಡಗಿ ನಿಂತ ನೋವ ದನಿಯು
ನೆನಪ ಪುಟದ ಸಾಲಿಗೆರಗಿ
ಒತ್ತಿ ಬರುವ ಮೌನ ದನಿಯು .,
ಶಬ್ದವಾಗಿ ಪದವ ಮರೆತು
ಮಾತನಾಡ ಹೊರಟಿದೆ
ಅದೇನ ಕುರಿತು..?
ಕೇಳುತಿದೆ ಮೌನವಾಗಿಯೇ
ಭಾವಕಿಲ್ಲವೇ ಬೆಲೆ ಒಂದಿನಿತು..?!

———————-

ತಲೆದೂಗಿದೆ ಮರ
ನಿತ್ಯ ಜೀವ ಕೊಡುವ
ನೇಸರನ ಶೃದ್ಧೆಗೆ,
ಆದರೆ ಆ ಮರದ
ತಲೆ ಉರುಳಿಸಲು
ಹವಣಿಸುತಿಹೆವಲ್ಲ ನಾವು..!
ಅದೇನು ಕವಿದಿದೆ ನಮ್ಮ ಬುದ್ದಿಗೆ..?!

———————–

ನಿಲ್ಲದ ಕನವರಿಕೆಗೆ
ಉಸಿರು ಸೇರಿ
ಮುಗಿಯದ ಕಥೆಯ ನಡುವೆ
ಹೆಸರು ಬರೆದು
ಹಬ್ಬಿದ ಮಬ್ಬು
ಸಾಲಿನ ಕಿಟಕಿಯಲಿ
ಬೆಳಕ ಕಿಡಿಯನು
ಇಣುಕಿ ಅರಸಿ..
ಕಾಣಲಾರೆನಾ ಎಂಬ
ಕೊಂಚ ದಿಗಿಲ
ಗೊಂದಲದೊಡೆ ಬೆರೆಸಿ
ಮಾನವ ಕದಡುತ
ಒದ್ದೆಯಾದ ಹನಿ
ಕೊಚ್ಚಿ ಹೋಗಿದೆ ಈಗ
ಹನಿಯೊಡೆದ ಮಳೆಯಲಿ..!

——————–

ತಮ್ಮ ಪ್ರತಿಕ್ರಿಯೆಗೆ ಸದಾ ಸ್ವಾಗತ.
ಇಂತಿ
ರಾಘವೇಂದ್ರ ಹೆಗಡೆ

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 28/07/2010, in ಹನಿಗವನ, ಹನಿಹರವು (ಕವಿತೆ). Bookmark the permalink. 7 ಟಿಪ್ಪಣಿಗಳು.

  1. ಸಚಿನ್ ಕ್ರಿಕೆಟ್ ಆಟಗಿಂಥಲೂ, ಮೆಸ್ಸಿ ಫೂಟ್ಬಲ್ ಆಟಗಿಂಥಲೂ, ನಿನ್ನ ಪದಗಳ ಆಟ ಈ ಕವಿತೆಯಲ್ಲಿ ತುಂಬಾ ಚೆನ್ನಾಗಿದೆ.
    ಅಭಿನಂದನೆಗಳು.

    Like

  2. ಬೆಳ್ಳಾಲ ಗೋಪಿನಾಥ ರಾವ್

    ಸತ್ವ ಭರಿತ ಕವನ
    ಧನ್ಯವಾದಗಳು

    Like

    • ಬೆಳ್ಳಾಲ ಗೋಪಿನಾಥ ರಾವ್ ಅವರಿಗೆ ಆತ್ಮೀಯ ನಮಸ್ಕಾರಗಳು.

      ತಾವು ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ.
      ತಮ್ಮ ಪ್ರೋತ್ಸಾಹಕ್ಕೆ ನಾ ಆಭಾರಿ.
      ತಮ್ಮ ಪ್ರತಿಕ್ರಿಯೆಗಳನ್ನು ಆಗಾಗ ಬರೆಯುತ್ತಿರಿ.

      Like

  3. ನಿಮ್ಮ ಬ್ಲಾಗ್ ಸುಂದರವಾಗಿದೆ..
    ನಿಮ್ಮ ಬರವಣಿಗೆಯೂ ಚೆನ್ನಾಗಿದೆ…

    ಅಭಿನಂದನೆಗಳು..

    ನಿಮ್ಮ ಬ್ಲಾಗ್ ಇನ್ನಷ್ಟು ಚೆನ್ನಾಗಿ ಬರಲಿ…

    ಪ್ರಕಾಶಣ್ಣ..

    Like

  1. ಮರುಕೋರಿಕೆ (Pingback): ಹನಿಯೊಡೆದ ಮಳೆಯಲಿ ಕೊಚ್ಚಿಹೋದ ಹನಿಗಳು .! « ಅವಧಿ

  2. ಮರುಕೋರಿಕೆ (Pingback): ರಾ ಗ ನೌ ಕೆ – 2010 in review « ರಾ ಗ ನೌ ಕೆ

ಹೇಗಿದೆ ಹೇಳಿ!