ಖಾಲಿ ಪುಟದ ಮೇಲೆ ಅಕ್ಷರಗಳಿರದ ಶಬ್ಧ.!

ಬಿಳಿಹಾಳೆಯು ಬರಿದಾಗಿದೆ ಪದವೊಂದು ಬಾರದೆ
ಬಳಿಬಂದಿಹ ತಂಗಾಳಿಯು ದೂರಸರಿದಿದೆ ಮೆಲ್ಲನೆ..!
ಆ ತೀರದಿ ಅಲೆ ಅಬ್ಬರಿಸಲು ಅನುಮಾನ ಮಾಡಿದೆ
ತರಣಿ ನಭವ ಕೀಳುವಂತೆ ಸುಮ್ಮನೆ ಜಾರಿದೆ
ನೀ ಬಾರದೇ, ನೀ ನೋಡದೆ
ಪದವೇ ನೀ ಬಾರೆಯ
ಬರಿದಾದ ಈ ಪುಟವ ತುಂಬಲಾರೆಯ.?

ಕಣ್ಣಂಚಲು ಸುಳಿವಿರಿಸದೆ ನೀ ಸುಳಿಯದಾದೆ
ಮನದಲ್ಲೆಲ್ಲು ತಳವೂರದೆ ನನ್ನ ಕವನ ಕಾಣೆಯಾಗಿದೆ
ನೀ ಬಾರದೆ ನೀ ನೋಡದೆ
ಪದವೇ ನೀ ಬಾರೆಯಾ
ಬರಿದಾದ ಈ ಪುಟವ ತುಂಬಲಾರೆಯ.?

ಅರಿವು ಇರದ ಅಭಿಪ್ರಾಯ ಅವತರಿಸಿ ಮರೆಯಾದಂತೆ
ಅನುವು ಮಾಡುವ ಭಾವ ಕಣ್ಸೋಕಿ ಅವಿತಿದೆ.
ನಾ ಸುಮ್ಮನೆ ಕುಳಿತು ಇಹದಾಚೆ ನಿನ್ನ ಹುಡುಕಿದಂತೆ..
ಮಿತಿಮೀರಿದ ಎಲ್ಲ ಕಲ್ಪನೆಗೂ ಕೊನೆ ಹಾಡುವಂತೆ ನೀ ಬಾ ಪದವೇ..

—- ರಾಘವೇಂದ್ರ ಹೆಗಡೆ

Advertisements

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 23/10/2010, in ಹನಿಹರವು (ಕವಿತೆ) and tagged . Bookmark the permalink. 1 ಟಿಪ್ಪಣಿ.

  1. ಪದಗಳ ‘ಅಲಭ್ಯತೆ’ಯನ್ನು ಕವನದ ‘ಲಭ್ಯತೆ’ಯನ್ನಾಗಿ ಮಾಡಿದ್ದು ಒಂದು ವಿಶೇಷ,

    ವಿನೂತನ,ವಿನೋದಕರವಾಗಿದೆ !!

    ತುಂಬಾ ಚೆನ್ನಾಗಿದೆ. ಅಭಿನಂದನೆಗಳು.

    Like

ಹೇಗಿದೆ ಹೇಳಿ!

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s