ಮುಗಿಯದ ಕಥೆಯಲಿ ಮುಗಿವ ಸಾಲು..
ಸಮಯ ಸುಮ್ಮನೆ
ಕಾಲ್ನಡಿಗೆಯಲ್ಲಿ ಸಾಗುತ್ತದೆ
ಅದನ್ನು ಬೆಂಬತ್ತಿ ಓಡುವವರ
ಅಣಕಿಸುವಷ್ಟು ವೇಗದಲ್ಲಿ..
****
ಚೇಷ್ಟೆಗೆಂದು ಗೆಳೆಯನೊಬ್ಬನ
ಹೀಯಾಳಿಸಿದ್ದೆ.
ಇನ್ನೂ ಕಾಲಿಡಬೇಕಿದ್ದ ಜಾಗದಲ್ಲಿ
ಕರ್ರ್ರನೆ ಬೀಳುತ್ತಿದ್ದ ನನ್ನ ನೆರಳು
ತಲೆ ಎತ್ತದಷ್ಟರ ಮಟ್ಟಿಗೆ
ನನ್ನನ್ನುಹೀಯಾಳಿಸಿತ್ತು.!
****
ಹಿಂದೆಲ್ಲ ಇಲ್ಲಿ ದೇವರೆಂದು ಪೂಜಿಸಿ
ಧಾನ್ಯಗಳನ್ನು ಬೆಳೆಯುತ್ತಿದ್ದರಂತೆ,
ಈಗ ದಿನಂಪ್ರತಿ ನೂರಾರು ಜನ
ಬರುತ್ತಾರೆ, ಇಲ್ಲಿ ದೇಗುಲವಿಲ್ಲ
ಆದರೆ ಎ.ಟಿ.ಎಂ. ಕೌಂಟರು ತಲೆಯೆತ್ತಿದೆ!
****
— ರಾಘವೇಂದ್ರ ಹೆಗಡೆ
Posted on 22/12/2010, in ಹನಿಗತೆ, ಹನಿಹರವು (ಕವಿತೆ). Bookmark the permalink. 1 ಟಿಪ್ಪಣಿ.
🙂
nice and very True lines..
LikeLike