ನೆನಪುಗಳ ಮಾತು.. : ಕೊಡಚಾದ್ರಿ ಚಾರಣ – ಅಂಕಣ ೩

..ಹಿಂದಿನ ಸಂಚಿಕೆಯಿಂದ

ಇದು ಶ್ರೀ ಶಂಕರಾಚಾರ್ಯರ ತಪೋಭೂಮಿ. ಇದೇ ಮೂಕಾಂಬಿಕೆಯ ಮೂಲ ಎಂಬುದು ನಂಬಿಕೆ. ಕೊಲ್ಲೂರಿಗೆ ಬರುವ ಬರುವ ಬಹುತೇಕ ಯಾತ್ರಾರ್ಥಿಗಳು ಕೊಡಚಾದ್ರಿಗೆ ಹೋಗಿಬರದೇ ಇರುವುದಿಲ್ಲ. (ಅದರಲ್ಲೂ ವಿಶೇಷವಾಗಿ ಕೇರಳ ಮತ್ತು ತಮಿಳುನಾಡಿನ ಭಕ್ತರು.)

ಚಿತ್ರದಲ್ಲಿ: (ಎಡದಿಂದ) ಹರೀಶ್ ಎಂ ಮತ್ತು ವಿಶುಕುಮಾರ್

ಅಪರೂಪದ ವನ್ಯ ಪ್ರಭೇದಗಳನ್ನು ತನ್ನೊಳಗಿಟ್ಟುಕೊಂಡ ತಾಣ ಈ ಕೊಡಚಾದ್ರಿ. ಇದಕ್ಕೆ ಸಂಜೀವಿನಿ ಪರ್ವತ ಎಂಬ ಪ್ರತೀತಿ ಇದೆ. ಇಲ್ಲಿ ಹಲವಾರು ಬಗೆಯ ಸಂರಕ್ಷಣೀಯ ಔಷಧೀಯ ಸಸ್ಯಗಳಿವೆ. ಪಶ್ಚಿಮ ಘಟ್ಟಗಳಲ್ಲಷ್ಟೇ ಕಂಡುಬರುವ ವಿಶಿಷ್ಟ ವನ್ಯಸಂಕುಲ ಇಲ್ಲಿ ಆಶ್ರಯ ಪಡೆದಿವೆ. ಉತ್ತರ ಕನ್ನಡದ ಶಿರಸಿ, ಸಿದ್ದಾಪುರ, ಕುಮಟಾ ಮತ್ತು ಹೊನ್ನಾವರದ ಅರಣ್ಯಗಳಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುವ ಸಿಂಘಳೀಕ(ಉತ್ತರ ಕನ್ನಡದಲ್ಲಿ ಅದನ್ನು ’ಕೋಡ’ ಎಂದು ಕರೆಯುತ್ತಾರೆ) ಈ ಬೆಟ್ಟಗಳಲ್ಲೂ ಕಂಡುಬರುತ್ತದೆ.
***
ಕೊಲ್ಲೂರಿನಿಂದ ಕೊಡಚಾದ್ರಿವರೆಗೆ ಹೋಗಲು ಬಾಡಿಗೆಗೆ ಜೀಪುಗಳು ದೊರಕುತ್ತವೆ. ನಿಟ್ಟೂರು-ಕೊಡಚಾದ್ರಿ ನಡುವೆ ರಸ್ತೆ ಸಂಪರ್ಕವಿದೆ. ಆದರೆ ಅದು ತುಂಬಾ ಅಪಾಯಕಾರಿ ತಿರುವುಗಳನ್ನು, ದೊಡ್ಡದೊಡ್ಡ ಗುಂಡಿಗಳನ್ನು ಹೊಂದಿದ ಮಣ್ಣುರಸ್ತೆ. ಹಾಗಾಗಿ ಪರಿಣಿತ ಚಾಲಕರು ಮಾತ್ರ ಈ ಮಾರ್ಗಕ್ಕೆ ಬರಲು ಒಪ್ಪುತ್ತಾರೆ.
***
ಏಪ್ರಿಲ್ ಹತ್ತರ ಬೆಳಗ್ಗೆ ೧೦:೩೦ ರ ಹೊತ್ತಿಗೆ ಬಂದ ಹಾದಿಯಲ್ಲೇ ಇಳಿಯಲಾರಂಭಿಸಿದೆವು. ಬರುವಾಗ ಮತ್ತೆ ಮತ್ತೆ ಹಿಂದಿರುಗಿದಾಗೆಲ್ಲ ಬಹಳ ದೂರದವರೆಗೂ ಗಾಳಿಯಂತ್ರದ ರೆಕ್ಕೆಗಳು ಗೋಚರವಾಗುತ್ತಿದ್ದವು. ನೆನಪ ಬುತ್ತಿ ತುಂಬಿಕೊಳ್ಳುತ್ತ ಹೆಜ್ಜೆ ಭಾರವಾಗುತ್ತಿತ್ತು. ಪವಿತ್ರಸ್ಥಳದ ಅಪೂರ್ವ ನಿಸರ್ಗರಮಣೀಯತೆಯನ್ನು ಸೆರೆಹಿಡಿದುಕೊಂಡಿದ್ದ ಕಣ್ಣುಗಳು ಧನ್ಯವಾಗಿದ್ದವು.

ಹಿಂದಿನ ರಾತ್ರಿ ಇದೇ ದಾರಿಯಲ್ಲೇ ಸಾಗಿದ್ದು!


ನಮ್ಮ ಟೀಂ: (ಎಡದಿಂದ) ಲತೇಶ್, ಸುದರ್ಶನ್, ನಾಗರಂಜಿತ್, ವಿಶುಕುಮಾರ್, ರೆನ್ನಿ, ರಾಘವೇಂದ್ರ ಹೆಗಡೆ, ಮೋಹನ್.


*****

ಕಡೆಗೊಂದು ಮಾತು:

ಇಂಥ ಪವಿತ್ರ ಸ್ಥಳವೂ ಮಾಲಿನ್ಯತೆಯಿಂದ ಮುಕ್ತವಾಗಿಲ್ಲ. ದಾರಿಯುದ್ದಕ್ಕೂ ಮತ್ತು ಶಿಖರದ ತುದಿಯ ಮಂದಿರದ ಆಸುಪಾಸು ಕೂಡ ಅಲ್ಲಲ್ಲಿ ಪ್ಲಾಸ್ಟಿಕ್ ಕವರ್ ಗಳು, ಪೆಪ್ಸಿ-ಕೋಕ್, ಬಿಸ್ಲೇರಿ ಮುಂತಾದ ಬಾಟಲಿಗಳು ಹರಡಿಬಿದ್ದಿರುವು ಕಣ್ಣಿಗೆ ರಾಚುತ್ತದೆ. ಎಂಥವರ ಮನಸ್ಸಿಗೂ ಇವು ಒಂದುಕ್ಷಣ ಖೇದವನ್ನುಂಟುಮಾಡದೆ ಇರುವುದಿಲ್ಲ.
(ಇದೇ ವಿಚಾರ ಮನದಲ್ಲಿ ಬಹಳಷ್ಟು ಕೊರೆದು ಕಾಡುತ್ತಿತ್ತು. ರೂಮಿಗೆಬಂದವನೆ ಒಂದು ಹಾಳೆಯನ್ನು ಹಿಡಿದು ಒಂದಷ್ಟು ಸಾಲುಗಳನ್ನು ಗೀಚಿಬಿಟ್ಟಿದ್ದೆ. ನಂತರದ ದಿನದಲ್ಲಿ ’ನಿಸರ್ಗದ ಈ ಕೂಗು ನಮಗೆ ಕೇಳುವುದೆಂದು…..?!’ ಎಂಬ ಶೀರ್ಶಿಕೆಯಲ್ಲಿ ಕವನವಲ್ಲದ ಆ ಕವನವನ್ನು ಬ್ಲಾಗಿಗೇರಿಸಿದ್ದೆ.)

ನಮ್ಮ ಮನಸ್ಸು ಹೇಗೆ ಸೂಕ್ಷ್ಮವೋ ಹಾಗೆ ನಮ್ಮನ್ನು ಸಲಹುವ ನಿಸರ್ಗ ಕೂಡ. ನಾವೆಲ್ಲ ನಮ್ಮ ಜವಾಬ್ದಾರಿಯನ್ನು ಅರಿತು ವರ್ತಿಸುವುದು ಅನಿವಾರ್ಯ ಮತ್ತು ಅತ್ಯವಶ್ಯ. ಸಕಲವನ್ನೂ ತನ್ನೊಳಗಿಟ್ಟುಕೊಂಡು ಪೊರೆವ ಪ್ರಕೃತಿಗೆ ನಾವು ಆಮೂಲಕ ಅಷ್ಟಾದರೂ ಕೃತಜ್ಞತೆ ತೋರಬೇಕಿದೆ.
********
(ಮುಗಿಯಿತು.)
– – – – – – – – – – – – – – – – – – – – – – – – – – – – – – – – – –
— ರಾಘವೇಂದ್ರ ಹೆಗಡೆ.

ಕೊಡಚಾದ್ರಿಯ ಬಗ್ಗೆ ಮತ್ತಷ್ಟನ್ನು ಓದಲು ಇಲ್ಲಿ ಕ್ಲಿಕ್ಕಿಸಿ

Advertisements

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 24/01/2011, in ಚಾರಣ, ಚಿತ್ರ ತೀರ, ವಿಹಾರ and tagged , . Bookmark the permalink. 3 ಟಿಪ್ಪಣಿಗಳು.

  1. ಈ ಲೇಖನ ತುಂಬಾ ಚೆನ್ನಾಗಿದೆ ಹಾಗೂ ಒಂದು ಚೂರು ಖರ್ಚಿಲ್ಲದೆ ಕೊಡಚಾದ್ರಿಯನ್ನ ತೋರಿಸಿದೆ.

    2012 ರ ಓಲಂಪಿಕ್ಸ್ ನಲ್ಲಿ ಭಾರತಕ್ಕೆ ಒಂದು ಚಿನ್ನದ ಪದಕ ಗ್ಯಾರಂಟೀ, ಅಲ್ಲಿ ” ಪರಿಸರ ಪ್ರಜ್ಞೆಯ ಬಗ್ಗೆ ಕಾಳಜಿಯ ಬರಹ ಸ್ಪರ್ಧೆ ” ಇದ್ದರೆ.

    Like

  2. ರಾಘು,ಇನ್ನೊಮ್ಮೆ ಸಾದ್ಯವಾದರೆ ಹೋಗೋಣ . ನಾನು ರೆಡಿ. ಒಂದೇ ಒಂದು ಬೇಜಾರು ಆದ ವಿಷಯ ಎಂದರೆ ಜನ ಅವರೊಬ್ಬರೇ ಹೋಗುವುದಿಲ್ಲ, ಹೋಗುವಾಗ ತಮ್ಮ ಜೊತೆ ಬಾಟಲಿಯನ್ನು ಒಯ್ಯುತ್ತಾರೆ.

    Like

  1. ಮರುಕೋರಿಕೆ (Pingback): ಆಕಾಶ ದೀಪವು ನೀನು..: ಕೊಡಚಾದ್ರಿ ಚಾರಣ – ಅಂಕಣ ೨ « ರಾ ಗ ನೌ ಕೆ

ಹೇಗಿದೆ ಹೇಳಿ!

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s