ನನ್ನ ಸುತ್ತಲ ಬೇಲಿ

ಹತ್ತಿರದ ಹಾದಿಯೆಂದು ರಸ್ತೆಗೆ
ಕಾಲಿಡುತ್ತಿದ್ದಾಗ ಅಂಗಿ ಕಾಲರಿಗೆ ಸಿಕ್ಕಿ
ನೂಲು ಎಳೆದ ಬೇಲಿಕೊಲು

ಅರೆ, ಆ ದಿನ ಎಲ್ಲ ಬಟ್ಟೆಗಳನ್ನು
ನೇತುಹಾಕಿ ಒಣಗಿಸಿದ್ದು ಇದರಲ್ಲೇ ಅಲ್ಲವೇ..?
ಕೊಳೆಗೆ ಮುಕ್ತಿಕೊಡಲು ನೀರಿಗಿಳಿದು
ಬಂದ ಬಟ್ಟೆಗೆ ಬಿಸಿಲ ಹಾಸ ಹೊದೆಸಿ
ಆಶ್ರಯಿಸಿದ್ದ ಇದೇ ಈಗ ಅಂಗಿ ಎಳೆದು
ನನ್ನ ಬಂಧಿಯಾಗಿಸುತಿದೆ..,

ಎಷ್ಟಾದರೂ ನಾನೇ ಹೇಳಿ ನಿರ್ಮಿಸಿಕೊಂಡ
ಆವರಣ ನನ್ನ ಕಟ್ಟಿಹಾಕಿದರೆ
ಅದ ದೂರುವುದದೆಂತು..?!

ಎರಡು ದೋಣಿಮೇಲೆ ಕಾಲಿಟ್ಟಂತೆ
ಆಚೆಗೊಂದು ಈಚೆಗೊಂದು ಕಾಲಿಟ್ಟ
ಅನುಭವ ಈಗ ನನಗೆ..
ಒಂದುರೀತಿ ನಿರ್ವಾತದಲಿ
ಉಸಿರಾಡುವ ಹಾಗೆ. ಹಗಲು-
ಇರುಳು ಕಣ್ಣಿಗೆ ನೆಸೆನೆಸೆದು ಉರುಳುತಿವೆ;

ಇಬ್ಬಂದಿ ಬಗೆಯ ಹೊಯ್ದಾಟದಲಿ
ನಾಕಾಬಂಧಿಯಾಗಿ ನನಗೆ ನಾನೇ
ಮೂರನೆಯವನಾಗುತ್ತಿದ್ದೇನೆ..
ಹೇಗಾದರೂ ಮಾಡಿ ಇದರಿಂದ ಪಾರಾಗಲು
ಮುಂದುಗಡೆ ಹೋಗಬೇಕೆನ್ನುವಷ್ಟರಲ್ಲಿ
ನೆನಪಾಗುತದೆ ಇದು ಹಿತ್ತಲ ಬೇಲಿಯಲ್ಲ;
– ಸುತ್ತಲ ಬೇಲಿ..!

— ರಾಘವೇಂದ್ರ ಹೆಗಡೆ

Advertisements

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 20/02/2011, in ಹನಿಹರವು (ಕವಿತೆ) and tagged , , , , , . Bookmark the permalink. 5 ಟಿಪ್ಪಣಿಗಳು.

 1. Raghu, beli horage aadastu bega baa…..!

  Like

 2. ಈ ಕವಿತೆಯ ಒಳ ಮರ್ಮ
  ರಾಮ್ ಗೋಪಾಲ್ ವರ್ಮ ಸಿನಿಮಾ ವಸ್ತುವಿನ ಹಾಗೆ ಸಂಕೀರ್ಣವಾಗಿ, ಸಂಕ್ಷಿಪ್ತವಾಗಿ, ಸುಂದರವಾಗಿ ಜೊತೆಜೊತೆಯಲಿ ಅರ್ಥಪೂರ್ಣವಾಗಿದೆ.

  Like

 3. nice maga,adre 2doniya mayle kalidabayada,

  Like

ಹೇಗಿದೆ ಹೇಳಿ!

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s