ಬಸಿಯದ ಹನಿಗಳು..!
ಸಂಜೆ ಹೊರಟ ಬಸ್ಸಿನ ತುಂಬ
ರಾಶಿ ರಾಶಿ ಕನಸಿನ ಗಂಟು
ನಿರೀಕ್ಷಿಸುತ ಬರುವ ಬೈಗಬಿಂಬ
ದ ಅಬ್ಧಿಗೇಕೆ ಹಾದಊರಿನ ಹೆಸರ ನಂಟು.?
*****
ವೇಗಮಿತಿ ಸೂಚಿ ಫಲಕಕ್ಕೆ
ಕಾಲಮಿತಿ ಕಟ್ಟಳೆಯಿಲ್ಲ
ನಡೆದವರ ನೆಳಲು
ಗಾಳಿಯಿಂದೆದ್ದ ಧೂಳು
ಬಸಿದ ನೆತ್ತರ ಹನಿ
ಬದುಕು ಬದಲಿಸಿದ ಹಾದಿ
ಎಲ್ಲ ಅದರ ಅವಗಾಹನೆಯಲಿ ಸೆರೆಯಾಗಿವೆ..
*****
ಹೆಸರ ಹಂಗಿರದ ಊರಿನ
ಕನಸೆ ಬೀಳದ ಕಣ್ಣಲಿ
ಕಸ ಬಿದ್ದು ನರಳಿದೆ..
ಇರುಳ ಮಗ್ಗುಲ ದಾಳಕೆ
ಸಂಜೆ ಕಡೆವ ಗಾಳಿ ಸೀಳಿ
ಬರುವ ಪ್ರಭೆ ನಲುಗಿದೆ..
******
ಹೊಳೆಯಲ್ಲಿ ಬೆಳೆದುನಿಂತ
ಮರಕ್ಕೀಗ ಅನಾಥಪ್ರಜ್ಞೆ
ಬಿಂಬ ನೀರಲಿ ಕಂಡರೂ ನೆರೆಯ
ಕಾನನವ ತಲುಪದ ಸಂಜ್ಞೆ
ಏಕಾಂತದ ಬದುಕಿಗೆ ಬಳಗ ಮರೀಚಿಕೆ..
ಕೊರೆವ ಬೇರು ಧರಣಿಯಂತರಾಳವ
ತಲುಪಿ ಸ್ಪರ್ಷಿಸಲು ಜೀವಜಲವ
ಇನ್ನೇಕೆ ಮರಕೆ
ಹೊಳೆಯ ಹಂಗು..?
******
— ರಾಘವೇಂದ್ರ ಹೆಗಡೆ
Posted on 02/05/2011, in ಹನಿಗತೆ, ಹನಿಗವನ, ಹನಿಹರವು (ಕವಿತೆ). Bookmark the permalink. 1 ಟಿಪ್ಪಣಿ.
I liked it very much!! Specifically the first 4 lines!!!
LikeLike