ಅನಿವಾರ್ಯ

ಒಂದರ್ಧ ಪುಟ ಬರೆದ ಖಾಲಿ
ಪದಗಳಿಗೆಲ್ಲ ತುಸು ಅವಸರ
ಮತ್ತೊಂದು ಬದಿಗೆ ಹಾಯಲು.

ಹಿಂದೆ ಮುಂದೆ ಎಲ್ಲ ಕಡೆ
ಅಲೆದಲೆದು ಮತ್ತೆ
ಯಾವುದೋ ಅಂಚು ತಲುಪಿ
ರಭಸ ಆಯುವ ತೆರೆ
ನುಸುಳಿ ಹೆಜ್ಜೆಗುರುತ ಹೊರೆ
ದಾಟಿ ಅಳಿಸಿದಾಗ ಹಟ
ಒಮ್ಮೆ ಜ್ವಲಂತವಾಗುವುದು
ಅನಿವಾರ್ಯತೆಯ ಪ್ರಶ್ನೆ ದಿಟ.

ಮೊನ್ನೆಯದರಂತೆ ನಿನ್ನೆ
ಅದರಂತೆ ಇಂದು- ನಾಳೆ
ಜೊತೆಗೊಂದಷ್ಟು ಅಪೇಕ್ಷೆ
ನಿರೀಕ್ಷೆ ಆಕಾಂಕ್ಷೆಗಳು
ಬುತ್ತಿ ಕಟ್ಟಿ ಬುಗುರಿ
ತೋರಿಸುತ್ತದೆ ದಾರ
ಅದಕೋ ಮೋಹ
ಬದುಕ ಮೇಲೆ ಅಪಾರ!

ನೂಲು ಜಗ್ಗದಿದ್ದರೂ
ಹಾರಿಸುತ್ತದೆ ಪಟವ ಗಾಳಿ
ತಡೆಯ ಒಡ್ಡು ಹಾಕಿದರೂ
ಹರವು ಚಿರ ಸಲಿಲ ಗುಪ್ತಗಾಮಿ

ಇಂತದಕ್ಕೆ ಇದೇ ಬೇಕು
ಎಂಬ ಗರಡಿ ಗಡಿ ಸರಪಳಿ
ಕೊಂಡಿಗಳಲಿ
ಮತ್ತದರ ಚಿಲಕಗಳಲಿ
ಸುತ್ತಿಕೊಳ್ಳುತ್ತ ಬಂಧಿಯಾಗುತದೆ
ಅನಿವಾರ್ಯ ಎಂಬ ಅನಿವಾರ್ಯತೆ

****

— ರಾಘವೇಂದ್ರ ಹೆಗಡೆ

Advertisements

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 17/12/2011, in ಹನಿಹರವು (ಕವಿತೆ) and tagged , , , , , , , , , , , . Bookmark the permalink. 2 ಟಿಪ್ಪಣಿಗಳು.

  1. bareyuvaga aguva tumulagalannu jeevanakke compare madi barediruva nimma yochane nijakku adbhutavagide….olartha arthavagabekadare omme odidare arthavagalu kashtsadhya annisuttade… nanna shubha haraike mimage…

    Like

  2. ‘ಅನಿವಾರ್ಯ’ ಕವಿತೆ ಓದಿದ ಬಳಿಕ ಇದು ಉತ್ತಮ ಕವಿತೆಯೋ ಅಥವಾ ಅತ್ಯುತ್ತಮ ಕವಿತೆಯೋ ಅಂತ ಗೊಂದಲಕ್ಕೆ ಒಳಗಾಗುವ ಅನಿವಾರ್ಯತೆಯೇ ಇಲ್ಲ!
    ಇದು ಅತ್ಯುತ್ತಮ ಕವಿತೆ…..

    Like

ಹೇಗಿದೆ ಹೇಳಿ!

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s