ನಿಮ್ನ ಮತ್ತು ಪೀನ

ಸಮಭಾಜಕಕ್ಕೆ ಅಕ್ಷಾಂಶ ರೇಖಾಂಶ
ಉರಿಬಿಸಿಲ ನಡುವೆ ಮೂರುಹೊತ್ತಿನ ಮಳೆ
ಹಿಮದ ಹೊದಿಕೆಗೆ ಬಣ್ಣದ ಅಂಗಿ
ಮನಸೋ ಶಾಪಗ್ರಸ್ಥ ಹೊಳೆ?

ಫಾಲ್ಗುಣ ಬಹುಳ ಸಪ್ತಮಿಯಂದು
ಸೂರ್ಯ ಮೀನಕ್ಕೆ ಸಂಕ್ರಮಿಸುವನಂತೆ
ಮುಂದಿನ ಬಹುಳ ಸಪ್ತಮಿಯಂದೂ
ಮೀನದಲ್ಲೇ ಇರುವನಂತೆ
ಪಾಪ ಅವನಿಗೇನು ಗೊತ್ತು
ನೀವು ಹೇಳುವ
ಹದಿನೆಂಟು ಘಟಿ ಇಪ್ಪತ್ತು
ಘಟಿಗಳ ಮೇಲಣ ತಿಥಿ

ಜೇನಿಗೆ ದುಂಬಿ; ಹಕ್ಕಿಗೆ ಬಿಂಬಿ
ಮುಗಿಯುವುದೂ ಒಂದು ನಿರಂತರ
ಇದಾ ಕಣ್ಣೆದುರ ರೂಪಾಂತರ?

ಕೂರ್ಮ, ವರಾಹ
ಸಾಲುಸಾಲು ಅವತಾರ
ಮೂಸೆಯಲಿ ಮುಗಿವ ಒಂದೊಂದೇ ದಿನ
ಅಸ್ತಿರ ದೇಹದಿ ಅಸ್ತಿಯ ಮೊಳೆ
ಪ್ರತಿ ಹನಿಗೂ ಒಂದು ಬಂದರ
ಮನಸು ವಿಮೋಚಿತ ಹೊಳೆ?

ವಿಸ್ತಾರ ತರಂಗಕೆ ಕಡಲ ಅನುಸಂಧಾನ
ಕೊನೆಯಿರದುದಕ್ಕೆ ಮುಂದುವರಿವ
ಜ್ಯಾಮಿತಿ ಅಳತೆ
ತಿರುತಿರುಗಿ ಬರುವುದಕೆ…
ತಿರುತಿರುಗಿ ಬರುವುದಕೆ
ಬೇಕಾ ಭಾವಾಂತರದ ಕವಿತೆ?

(ಸಶೇಷ)

— ರಾಘವೇಂದ್ರ ಹೆಗಡೆ

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 07/03/2012, in ಹನಿಹರವು (ಕವಿತೆ) and tagged , , , , , , , , , , , , , , , , , , , , , , . Bookmark the permalink. 6 Comments.

  1. ಸ್ವಂತ ‘ಕನ್ನಡ ಟು ಕನ್ನಡ’ ಶಬ್ದಕೋಶ ಯಾಕೆ ಬರೆಯಲಿಲ್ಲ ಅಂತನಿಸುವುದು ಹಾಡುಗಳನ್ನು ಕೇಳಿದಾಗ, ಬರೆದವರು ಯೋಗರಾಜ್ ಭಟ್.
    ಬಟ್ , ‘ವಾಸ್ತವಿ-ಕತೆ ಟು ವರ್ಣನಾ-ಕವನ’ ಶಬ್ದಕೋಶ ಬರೆದಿದ್ದಾರೆ ಅಂತನಿಸುವುದು ಈ ಹಾಡನ್ನು ಓದಿದಾಗ, ಬರೆದವರು ರಾಘ ನೌಕಾ ನಾವಿಕ !!

    Like

  2. What inspired you to write this Kavite?

    Like

  3. ಮುಂದಿನ ಭಾಗ ಓದಿದಮೇಲೆ ಕವಿತೆ ಇನ್ನು ಸ್ವಲ್ಪ ಅರ್ಥ ವಾಗಬಹುದು
    “ಕೂರ್ಮ, ವರಾಹ
    ಸಾಲುಸಾಲು ಅವತಾರ
    ಮೂಸೆಯಲಿ ಮುಗಿವ ಒಂದೊಂದೇ ದಿನ”
    ಸಾಲುಗಳು ತುಂಬಾ ಇಷ್ಟವಾಯಿತು.
    ಸ್ವರ್ಣಾ

    Like

  4. @ Pavan@ಕನ್ನಡ:
    ಮತ್ತು ಮೊದಲು ಕಾಮೆಂಟಿಸಿದವರು ಕನ್ನಡದ ಕುವರ ಪವನ್!
    ಗುರುಗಳೇ ತಮ್ಮ ಬರಹಾ ಚಾತುರ್ಯ ನನಗೆ ಗೊತ್ತು. ದಯವಿಟ್ಟು ಬ್ಲಾಗ್ ಲೋಕಕ್ಕೆ ಬನ್ನಿ
    ನನಗೆ ಒಂದು ಸ್ಮಾಲ್ ಡೌಟು ನೀವು ಬೇರೆ ಹೆಸರಲ್ಲಿ ಬ್ಲಾಗು ನಡೆಸುತ್ತಿದ್ದೀರ ಅಂತ ಹೌದಾ ?🙂

    @ Prateeksha: ಹೀಗೆ ಸುಮ್ಮನೆ ಬರೆದದ್ದು !🙂

    @ Swarna: Thanks Madam🙂

    Like

  5. ಬಹಳ ಅರ್ಥಗರ್ಭಿತವಾಗಿದೆ ನಿಮ್ಮ ಕವಿತೆ🙂

    Like

ಹೇಗಿದೆ ಹೇಳಿ!

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s