ಆಗುತ್ತದೆ ಹೀಗೂ…

೧. ನಡುಮಧ್ಯಾಹ್ನ ಸುಡುಬಿಸಿಲಲ್ಲಿ ಸೈಕಲ್ ತುಳಿಯುತ್ತ ಬಂದು ಡಜನುಗಟ್ಟಲೆ ಎಫ಼್.ಡಿ. ಸೆರ್ಟಿಫಿಕೇಟುಗಳನ್ನು ನವೀಕರಿಸಲು ಬ್ಯಾಂಕಿಗೆ ಕೊಡುವ ಎಪ್ಪತ್ತರ ವ್ಯಕ್ತಿಯನ್ನು ನೋಡುತ್ತ ಬದುಕಿನ ಬಗ್ಗೆ ವಿಪರೀತ ಹೆಮ್ಮೆ, ವ್ಯಾಮೋಹ, ಅಭಿಮಾನ ಪಡುತ್ತಲೆ ನಾನು ಬೈಕಿಗೆ ಪಕ್ಕೆಹೊಡೆಯುತ್ತೇನೆ; ಆಗೊಮ್ಮೊಮ್ಮೆ ನ್ಯೂಟನ್ನನ ಮೂರನೇ ನಿಯಮ ಎಂಜಿನ್ ನ ಬದಲು ನನ್ನಮೇಲೆ ಅನ್ವಯವಾಗಿಬಿಡುತ್ತದೆ.

೨. ಪ್ಲಾಸ್ಟಿಕ್ ಬಳಕೆ ನಿಷೇಧಿಸಿ – ಪರಿಸರ ಉಳಿಸಿ ಎಂಬೆಲ್ಲ ಘೋಷಣೆ-ಜಾಗ್ರತಿಗಳಿಗೆ ತಲೆದೂಗುತ್ತಲೆ ನಂದಿನಿ ಶಾಪಿನವನ ಬಳಿ ’ಹಾಲಿನ ಪ್ಯಾಕೆಟ್ಗೊಂದು ಪ್ಲಾಸ್ಟಿಕ್ ಕವರ್ ಹಾಕಿಕೊಡಪ್ಪ’ ಎಂದು ಆಗ್ರಹಿಸುವ ನನ್ನ ಧೋರಣೆಗೆ ಧಿಕ್ಕಾರವಿರಲಿ.

೩. ಬದುಕಿನ ಅನುಭವಗಳಿಗೆಲ್ಲ ಪದವಿ ಕೊಡುವ ವಿಶ್ವವಿದ್ಯಾಲಯವೊಂದಿದ್ದರೆ ಅರ್ಜಿ ಗುಜರಾಯಿಸಿಬಿಡಬಹುದಿತ್ತು ಎಂದು ’ಅಡ್ವಾನ್ಸ್ಡ್ ಅಲ್ಗಾರಿದಮ್ಸ್’, ’ಫಾರ್ಮಲ್ ಮಾಡೆಲ್ಸ್’ ಮುಂತಾದ ವಿಚಿತ್ರ-ವಿಚಿತ್ರ ಹೆಸರಿನ ತರ್ಕಕ್ಕೆ ನಿಲುಕದ ವಿಷಯಗಳನ್ನು ಓದುವಾಗ ಹಲವು ಬಾರಿ ಅನಿಸುವುದಿದೆ.

೪. ಅರೆವಾಹಕ, ಉಷ್ಣವಾಹಕ, ವೇಗವರ್ಧಕ, ಸಂಸ್ಕಾರಕ, ಸಂಗ್ರಾಹಕ, ಕಾರ್ಯನಿರ್ವಾಹಕ, ಸೂಚಕ, ನಿಯಂತ್ರಕ, ಡಯೋಡು-ಚಿಪ್ಪು ಮುಂತಾದವುಗಳ ಜೊತೆಜೊತೆಗೇ ತೆಂಗಿನ ಚಿಪ್ಪು, ಅಡಿಕೆ ಶಿಪ್ಪು ಎಲ್ಲ ಅನುಭಾವ ಒತ್ತರಿಸಿ ಸಾಲುಸಾಲಾಗುತ್ತಿದ್ದಂತೆ ಯಾರೋ ತಿಳಿದವರು ಅದು ಕವಿತೆಯೇ ಅಲ್ಲ ಅಂದುಬಿಡುತ್ತಾರೆ.

೫. ಈ ಬಾರಿ ಖಂಡಿತ ಸೂರ್ಯನ ಬಿಂಬ, ನೀರಿನ ಪ್ರತಿಫಲನ, ಬೆಳಕ ವಕ್ರೀಭವನ-ಚದುರುವಿಕೆ ಮುಂತಾದ ಎಕ್ಸ್ ವೈ ಝಡ್ ಎಫೆಕ್ಟುಗಳನ್ನೆಲ್ಲ ತೋರಿಸುತ್ತೇನೆಂದು ನಂಬಿಸುವ ಕ್ಯಾಮರ ಲೆನ್ಸು ಕಡೆಗೂ ನೇತ್ರದ್ವಯಗಳೆದುರು ಸೋತುಬಿಡುತ್ತದೆ.

೬. ಊರುಬೆಸೆವ ಸಲುವಾಗಿ ದಾರಿಯೊ ಅಥವಾ ದಾರಿಬೆಸೆವ ಸಲುವಾಗಿ ಊರೋ, ಜೀವಕೆ ಬದುಕೋ ಅಥವ ಬದುಕಿಗೆ ಜೀವವೋ ಎಂಬ ಉನ್ಮತ್ತ ಗೊಂದಲದಲ್ಲೇ ರೈಲು ಭಾವಸೇತುಗಳನ್ನು ಹಾಯುತ್ತಿರುತ್ತದೆ; ಅಕ್ಷರಗಳು ಪದವಾಗದೇ ಹಳಿಗಳಮೇಲೆ ಉಳಿದುಹೋಗುತ್ತವೆ.

— ರಾಘವೇಂದ್ರ ಹೆಗಡೆ

Advertisements

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 07/05/2012, in ಕೊಸರು/ ಕನವರಿಕೆ, ಪದಗೊಂಚಲು, ಹನಿಗತೆ and tagged , , , , , , . Bookmark the permalink. 3 ಟಿಪ್ಪಣಿಗಳು.

 1. ಪ್ಲಾಸ್ಟಿಕ್ ಬಳಕೆ ನಿಷೇಧಿಸಿ – ಪರಿಸರ ಉಳಿಸಿ ಎಂಬೆಲ್ಲ ಘೋಷಣೆ-ಜಾಗ್ರತಿಗಳಿಗೆ ತಲೆದೂಗುತ್ತಲೆ ನಂದಿನಿ ಶಾಪಿನವನ ಬಳಿ ’ಹಾಲಿನ ಪ್ಯಾಕೆಟ್ಗೊಂದು ಪ್ಲಾಸ್ಟಿಕ್ ಕವರ್ ಹಾಕಿಕೊಡಪ್ಪ’ ಎಂದು ಆಗ್ರಹಿಸುವ ನನ್ನ ಧೋರಣೆಗೆ ಧಿಕ್ಕಾರವಿರಲಿ.
  nice one i like it

  Like

 2. ರಾಘವೇಂದ್ರ ಹೆಗಡೆಯವರೇ,

  ಜೀವನದ ಅನುಭವಗಳನ್ನು ವಿಬಿನ್ನ ದೃಷ್ಟಿಯಿಂದ ನೋಡಲು ಪ್ರಯತ್ನಿಸಿರುವ ನಿಮ್ಮ ಸಾಲುಗಳು ಬಹಳಷ್ಟು ಹಿಡಿಸಿದವು.

  (ಊರುಬೆಸೆವ ಸಲುವಾಗಿ ದಾರಿಯೊ ಅಥವಾ ದಾರಿಬೆಸೆವ ಸಲುವಾಗಿ ಊರೋ, ಜೀವಕೆ ಬದುಕೋ ಅಥವ ಬದುಕಿಗೆ ಜೀವವೋ ಎಂಬ ಉನ್ಮತ್ತ ಗೊಂದಲದಲ್ಲೇ ರೈಲು ಭಾವಸೇತುಗಳನ್ನು ಹಾಯುತ್ತಿರುತ್ತದೆ; ಅಕ್ಷರಗಳು ಪದವಾಗದೇ ಹಳಿಗಳಮೇಲೆ ಉಳಿದುಹೋಗುತ್ತವೆ.)

  ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ, ಎಂಬ ದಾಸರಪದವನ್ನು ನೆನಪಿಸಿ, ಯಾಕೋ ಒಂದು ರೀತಿಯ ಹೇಳಲಾರದ ತನ್ಮಯ ಭಾವಾನುಭವ ನೀಡಿತು.

  ಅಭಿನಂದನೆಗಳು

  Like

ಹೇಗಿದೆ ಹೇಳಿ!

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s