ನೀಲಿ ಮುಗಿಲಿನಡಿ ಅವಿತ ಸಾಲು ನಕ್ಷತ್ರದಂತೆ…

ನೀಲಿ ಮುಗಿಲಿನಡಿ ಅವಿತ
ಸಾಲು ನಕ್ಷತ್ರದಂತೆ
ನನ್ನೆದೆಯಲಿ ನಿನ್ನ ನೆನಪು

***

ಪ್ರಶಾಂತ ನದಿಯಲಿ
ಜಲತರಂಗ
ನೀ ಎದುರು ನಿಂತಾಗ

***

ಹನಿಯಾಗಲೆಂದೇ
ಬಂದ ಪದ
ನಿನ್ನ ನೋಟಕೆ ಸ್ಥಬ್ದ

***

ನಿನ್ನ ತಲುಪಲಾಗದ್ದಕ್ಕೇ
ಗಾಳಿ ಅಸುನೀಗಿದ್ದು
ಸುರಿಯದೆ ಜಡಿಮಳೆ ಬತ್ತಿದ್ದು

***

ನೀನೋ ಸುಮ್ಮನೆ
ಹೊರಟುಹೋದೆ, ಕಾಮನಬಿಲ್ಲಿನಡಿ
ಹಕ್ಕಿಯ ಗೂಡು ಕಳಚಿಬಿತ್ತು

***

ನಿನ್ನ ತಲುಪಿರದುದಕ್ಕೇ
ಗಾಳಿ ತುಸು ಕೊಸರಿದ್ದು
ಮತ್ತೆಲ್ಲೋ ಹನಿ ಉಸುರಿದ್ದು?

***

— ರಾಘವೇಂದ್ರ ಹೆಗಡೆ

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 01/06/2012, in ಪದಗೊಂಚಲು, ಹನಿಗವನ, ಹನಿಹರವು (ಕವಿತೆ), ಹಾಯ್ಕು and tagged , , , , , , , , , . Bookmark the permalink. 10 ಟಿಪ್ಪಣಿಗಳು.

  1. ಚೆನ್ನಾಗಿದೆ ನಿಮ್ಮ ಬಿಡಿಬರಹ:)

    Like

  2. ನೀಲಿ ಮುಗಿಲಿನಾಚೆ ಕುಳಿತಿರುವ
    ಸಾಲು ದೇವತೆಗಳಂತೆ, ಅಜರಾಮರ
    ನನ್ನೆದೆಯಲಿ ಈ ಕವಿತೆಯ ನೆನಪು

    ***

    ಭೀಭತ್ಸ ಸಾಗರದಲಿ
    ಅಲೆನಿಲುಗಡೆ
    ರಾಗನೌಕೆ ತೀರದಲಿ ನಿಂತಾಗ

    ***

    ಗುಡುಗಲೆಂದೇ
    ಬಂದ ಮಿಂಚು
    ನಿನ್ನ ಪದಗಳ ಆಟಕ್ಕೆ ನಿಶಬ್ಧ

    ***

    ನೌಕೆ ತಲುಪಿದ್ದಕ್ಕೇ
    ಬೆಂಕಿ ಸುಟ್ಟಿದ್ದು
    ಸುರಿಯದೆ ಮಳೆ ಸೋನೆ ಸೂಸಿದ್ದು

    ***

    ನೀನೋ ಸುಮ್ಮನೆ
    ಬಂದೆ ನೀರಬಣ್ಣ, ಹ್ರದಯ೦ಗಣದೊಳಗೆ
    ಕನಸಿನ ಗೂಡು ಅರಮನೆಯಾಯಿತು

    ***

    ರಾಘವನು ತಲುಪಿದುದಕ್ಕೇ
    ಗಾಳಿ ಬಹು ತಂಗಾಳಿಯಾಗಿದ್ದು
    ಇಲ್ಲೆಲ್ಲೋ ಹನಿ ಮುತ್ತು ಹಡೆದಿದ್ದು ?

    Like

    • ಪವನ್ :

      ದಡ ತಲುಪಿದ್ವಿ ಅಂತ ನಾವು ಆಗಾಗ ಅಂದು ಕೊಳ್ತಾ ಇರ್ತೀವಿ. ಆದ್ರೆ ಜೀವನದ ಹರವಿಗೆ ಎಲ್ಲಿ ತಡೆ, ಯಾವ ದಡ.. ? ಎಲ್ಲ ಒಂದೊಂದು ನಿಲ್ದಾಣ, ಕೊನೆ ಅನಂತ ಅಲ್ವೇ !?

      “ನೌಕೆ ತಲುಪಿದ್ದಕ್ಕೇ
      ಬೆಂಕಿ ಸುಟ್ಟಿದ್ದು
      ಸುರಿಯದೆ ಮಳೆ ಸೋನೆ ಸೂಸಿದ್ದು ..”

      ಅಬ್ಬ ಅದ್ಬುತ ಸಾಲುಗಳು ದೋಸ್ತ್ ! 🙂
      ನಾನು ಯಾವಾಗಲೂ ಹೇಳುವಂತೆ ನನ್ನ ಬಹುತೇಕ ಬರಹಕ್ಕೆ ನಿನ್ನ ಪ್ರತಿಕ್ರಿಯೆಯ ಉದ್ದೀಪನವೇ ಕಾರಣ ಗೆಳೆಯ.! ಬರುತ್ತಿರು. ಬರೆಯುತ್ತಿರು… 🙂

      Like

  3. ತುಂಬಾ ಸೊಗಸಾಗಿದೆ! 🙂 ನಿಮ್ಮ ನೀಲಿ ಮುಗಿಲಿನಡಿ ಅವಿತ ಕವಿತೆ…

    Like

  4. ರಾಘ್ಹವೇ೦ದ್ರರೇ.. ಚೆ೦ದದ ನೀಲಿ ಮುಗಿಲು!
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    Like

ಹೇಗಿದೆ ಹೇಳಿ!