ಮೂರುಸಂಜೆ ದೀಪ

ಚೂರು ಚೂರಾಗಿ ಬಿಕ್ಕಿ ಹಾರುವ
ಮೋಡ ನಿನ್ನ ಜಿಟಿಜಿಟಿ
ಒಂಟಿಹಾದಿಗೆ ಮೂರುಸಂಜೆಯ ದೀಪ

ಅನಂತದ ತಿಳಿನೀಲಿ ಬಣ್ಣದಂತೆ ಹೊಳೆದು
ಟೆರೆಸ್ ಹತ್ತಿ ಕೂತು ನಿನ್ನ ಅಣಕಿಸುವ
ಡ್ಯೂರಶೈನ್ ಶೀಟು
ಒಂದು ಹುಲ್ಲೂ ಹುಟ್ಟದ
ಕಾಂಕ್ರೀಟು ರೋಡುಗಳನೆಲ್ಲ
ಬೈಪಾಸ್ ಹಾಯದೇ ಕ್ಷಮಿಸಿಬಿಡು.

ಆ ಬೋಳುಗದ್ದೆಯಲ್ಲಿ ಜಮಾನದಲ್ಲಿ
ಭತ್ತ ಬೆಳೆಯುತ್ತಿದ್ದರು
ಅಕೋ ಆ ಹಣೆಪಟ್ಟಿ
ಹಂಗಿರದ ಬೆಟ್ಟ ಮತ್ತಲ್ಲಿ
ಹರಿವ ಅಘನಾಶಿನಿ ಮಾತ್ರ
ಈಗ ಜೀವಂತ ಸಾಕ್ಷಿ

ವರವಾಗಿ ಸುರಿದುಬಿಡು
ಇಲ್ಲೇ ಆಚೀಚೆಯ
ಮಣ್ಣ ಕಣಕಣದ ಗಂಧ ಸೇಚುವಂತೆ

ಇರು ಒಂದೆರಡು ನಿಮಿಷ
ಉಳಿದರ್ಧ ಕಪ್ಪು ಚಹಾ ಹೀರಿ
ಈ ಮಾಡಿನಿಂದಾಚೆ ನಾನೂ ಬರುವೆ
ಬೀಸದ ನಿರ್ಜೀವ ಗಾಳಿ
ಪಂಜಿಯಲಿ ಮೊಳಕೆಯೊಡೆಯಲಿ
ಕವಿತೆಯಾದರೂ ಒಂದು
ಜತನವಾಗಿ, ಪತನವಾಗಿ,
ಇಲ್ಲ ಅನಾಥವಾಗಿ

–ರಾಘವೇಂದ್ರ ಹೆಗಡೆ

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 18/07/2012, in ಹನಿಹರವು (ಕವಿತೆ) and tagged , , , , , , , , , , , , , , , . Bookmark the permalink. 5 ಟಿಪ್ಪಣಿಗಳು.

  1. ಸೊಗಸಾದ ಕವನ…

    ಚೂರು ಚೂರಾಗಿ ಬಿಕ್ಕಿ ಹಾರುವ
    ಮೋಡ ನಿನ್ನ ಜಿಟಿಜಿಟಿ
    ಒಂಟಿಹಾದಿಗೆ ಮೂರುಸಂಜೆಯ ದೀಪ

    ಮಣ್ಣ ಕಣಕಣದ ಗ೦ಧ ಸೇಚುವ೦ತೆ…

    ಅಧ್ಬುತವಾದ ಸಾಲುಗಳು!
    ಮೊದಲೆರಡು ಸಾಲುಗಳಲ್ಲಿ ಕಟ್ಟಿಟ್ಟಿರುವ ನಗರೀಕರಣ ಮತ್ತು ಗ್ರಾಮೀಣದ ಪಳೆಯುಳಿಕೆಗಳ ಮಿಶ್ರಣ ಸೊಗಸಾಗಿದೆ..
    ಒ೦ದೊಳ್ಲೆ ಕವನಕ್ಕಾಗಿ ಧನ್ಯವಾದಗಳು.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    Like

  2. ಬೀಸದ ನಿರ್ಜೀವ ಗಾಳಿ
    ಪಂಜಿಯಲಿ ಮೊಳಕೆಯೊಡೆಯಲಿ
    ಕವಿತೆಯಾದರೂ ಒಂದು
    ಜತನವಾಗಿ, ಪತನವಾಗಿ,
    ಇಲ್ಲ ಅನಾಥವಾಗಿ!!

    Like

  3. Bolu gadde, Bolu nela … kaledare kaadalli kshana hottu, nintu nodidavarige gottu, eshtu tumbuvudu manadalli nesarada sobagina mattu;

    Sutta muttalu sakalavu mannagi, Eaga ellavu kevala nenapagi, kadu bolagi – tirugutide naadaagi, vinaashada haadige naandiyaagi.

    Like

  4. ಕಾಮೆಂಟಿಸಿದ ಮತ್ತು ಲೈಕಿಸಿದ ಎಲ್ಲರಿಗೂ ಧನ್ಯವಾದಗಳು 🙂

    Like

ಹೇಗಿದೆ ಹೇಳಿ!