ಸರಗೋಲು

ಕಡಲು ಕಾಣದೇ ಉಳಿದೀತು
ಅಲೆ ಸೋತರೆ
ಯಾವ ಬಾನಿ ಮತ್ತೆ ಜಗಕೆ
ಬಣ್ಣ ಕಟ್ಟೀತು ಮುಗಿಲು
ನೀ ತುಸು ನಕ್ಕರೆ
ಹೆಗಲುಗಳು ಯಾಕೆ
ವ್ಯಕ್ತ ಯುಗಕೆ

ಈಜುವುದು ಮೋಡ
ಬಾನಾಡಿಗಳ ಹಾವಳಿಯಲ್ಲಿ
ಮೀಯುವುದು ಮುಸಲಧರೆ
ಹಸಿಬೆಳಕ ಚಾವಡಿಯಲ್ಲಿ
ತೀರದ ದಾಹದಲಿ
ಹರಿವ ನಾಗಾಲೋಟದಲಿ
ಇರುಳಿನಲಿ ನಸುಕಿನಲಿ
ಒಲೆಯಡಿಯ ಕೆಂಡದಲಿ
ಉಗಿಯ ಹಾಸುವ ಉಸಿರು
ಎಲೆ ಮೊಗ್ಗುಗಳ
ಕಿಡಿ-ಕುಡಿಬಸಿರು

ಹಾಯ್ವ ಹಾದಿಯ ತೆರೆದು
ಕಾಯ್ವ ಕಥನವ ಬರೆದು
ಕಾಲ ಬರಮಾಡುವ
ದೀವಟಿಗೆ ನೀನು
ಸುಳಿಯ ಸಂಚಿಯಲವಿತು
ಹಿಂದೆ-ಮುಂದಕೆ
ಈಜ ಭೃಮಿಸುತಲಿ
ನಡೆವ ಧೂಳು ನಾನು?
—————

— ರಾಘವೇಂದ್ರ ಹೆಗಡೆ

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 26/01/2013, in ಚಿತ್ರ ತೀರ, ಹನಿಹರವು (ಕವಿತೆ) and tagged , , , , , . Bookmark the permalink. 1 ಟಿಪ್ಪಣಿ.

  1. ಬೆರೆಯುವಾಗ ಯಾವ ಲಹರಿಯಲ್ಲಿದ್ದಿರಿ ! ಏನೋ ತತ್ವ ಜ್ಞಾನದ ಸಲೆ ಕಾಣಿಸ್ತಾ ಇದೆ !!

    ಹಿಂದೆ-ಮುಂದಕೆ
    ಈಜ ಭೃಮಿಸುತಲಿ
    ನಡೆವ ಧೂಳು ನಾನು?

    ಚೆಂದದ ಸಾಲುಗಳು.

    Like

Leave a reply to ravikiranhv ಪ್ರತ್ಯುತ್ತರವನ್ನು ರದ್ದುಮಾಡಿ