ಮತ್ತೆ ಮತ್ತೆ ಕವಿತೆ

ಹರಿದು ಬಿಡು ಸುಮ್ಮನೆ
ಕಣ್ಣೀರು ನನ್ನೆದೆ ತಲುಪದಂತೆ
ಬರೆದುಬಿಡು ಒಮ್ಮೆಗೆ
ಕವಿತೆ ಮತ್ತೆ ನೆನಪಾಗಿ ಕಾಡದಂತೆ

ನನ್ನ ಮೋಡದ ಬುಟ್ಟಿ
ತಳಒಡೆದು ಹನಿಸುವಲ್ಲಿ
ನಿನ್ನ ಒನಪಿನ ಕುಡಿಕೆ
ಮನದ ಮುಗಿಲೊಳು ಬಿರಿಯೆ
ಚಿತ್ತಭಿತ್ತಿಯೊಳಿನ್ನಾವ ಮೂರ್ತರೂಪ
ಒಲವ ಭರವಸೆಯೊಂದೆ ಸುಪ್ತದೀಪ?

ನಿನ್ನ ನೋಟದ ಸೆಳೆತ
ನನ್ನೆದೆಯ ನದಿಗಿಲ್ಲ
ನಗುಮೊಗವು ಅಲೆಯುಲಿವ ಕಡಲಿನಂತೆ
ಭೋರ್ಗರೆವ ಮನಸಿನಲಿ
ಸುಡುವ ಬೆಳದಿಂಗಳೊಳು
ತಂಗಾಳಿ ಕವಿಯುವುದೆ ಆಪ್ತ ಕವಿತೆಯಂತೆ?

ತಲುಪಿಲ್ಲ ನಾನಿನ್ನೂ ನಿನ್ನೊಲವಿನ ತಟವ
ಹಾರಬೇಕಿನ್ನು ಕವಿತೆಯೊಳಗಿನ ಸ್ವರದಗೂಡೆ
ಹೂವ ಕಟ್ಟಿದ ದೀಪ ಮೊಗ್ಗಿನೆಸಳನು ಮೀಟಿ
ಮುಸ್ಸಂಜೆರಂಗಂತೆ ಇನ್ನಾದರೂ ನಿನ್ನ ತಲುಪಬಹುದೇ?


ಡಿಸೆಂಬರ್ 3ಕ್ಕೆ ‘ರಾ ಗ ನೌ ಕೆ’ಗೆ 7 ತುಂಬಿತು. ಬರಹಗಳಿಗೆ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಕೃತಜ್ಞತೆಗಳು.

— ರಾಘವೇಂದ್ರ ಹೆಗಡೆ


About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 30/12/2016, in ಬ್ಲಾಗ್ ಕುರಿತು, ವಿಶೇಷ, ಹನಿಹರವು (ಕವಿತೆ) and tagged , , , , . Bookmark the permalink. 2 ಟಿಪ್ಪಣಿಗಳು.

  1. ಏಳು ವರ್ಷತುಂಬಿದ ಬ್ಲಾಗಿಗೆ ಶುಭಾಶಯಗಳು ಬ್ಲಾಗಿನ ರೂವಾರಿಗೆ ಅಭಿನಂದನೆಗಳು. ನಿಮ್ಮ ರಚನೆಯ ಕೊಡುಗೆ ಸಾರಸ್ವತ ಲೋಕಕ್ಕೆ ನಿರಂತರವಿರಲಿ.

    Like

ಹೇಗಿದೆ ಹೇಳಿ!