ಕರುನಾಡಿಗೊಂದು ನುಡಿ ನಮನ

ವಿವಿಧ ನಾದ ಸ್ವರಗಳ
ಬಗೆಯ ಗ್ರಂಥದ ಸೂತ್ರದ ಹಂದರ.
ಶುಭ್ರ ಭಾವಕೆ ಪುಣ್ಯ ಕಲಶ-ಕೋಶಕೆ
ನಿತ್ಯ ಅಶ್ರಯೀ ಮಂದಿರ.
ಮುಗಿಲೆಡೆ ಹಾರುವ ಕೀರ್ತಿ ಬಾನಾಡಿಗೆ
ಕನ್ನಡವೇ ಇಂಚರ..
ಕನ್ನಡವೇ ಸುಮಧುರ….
ಶಾಸ್ತ್ರೀಯ ಕಂಪ-ಶ್ರೀಗಂಧ ಲೇಪಿತ
ಸ್ವರ್ಣ-ಸಿರಿಗನ್ನಡ ನಾಡಿಗಿದೋ ನುಡಿ ನಮಸ್ಕಾರ.||

ವಿಶ್ವಶಾಂತಿ ಸಾಗರದ ಪುಟ್ಟ ಬಿಂದು.
ಕರ್ಮಕೊಟೆಯೊಳಗೆ ಪುಣ್ಯಭಾವಸಿoಧು.
ವಿಜ್ಞಾನ ನೀಲಾಂಜನದ ಕರ್ಪೂರ..
ಕ್ಷಮತೆಯ-ದಕ್ಷತೆಯ ಎ ಹಾರ,
ಜಗದ ಭೂಪಟಕೆ ಸಿಂಗಾರ.
ಶಾಸ್ತ್ರೀಯ ಸೊಗಡ-ಸಿರಿಚಂದನ
ಲೇಪಿತ ಸ್ವರ್ಣ ಸಿರಿಗನ್ನಡ
ನಾಡಿಗಿದೋ ನುಡಿ ನಮಸ್ಕಾರ.||

ತಂಪು ಕಂಪ ಬಯಲ ಆಲಯ.
ಸಹ್ಯಾದ್ರಿಮಡಿಲ ಪದುವಣತೀರದ
ಸಂಗಮ ವಲಯ..
ಭರತ ಖಂಡಕೆ ಸ್ಪೂರ್ತಿ ಚಿಲುಮೆಯ ಹೃದಯ.
ಜಗದ ಅಭ್ಯುದಯದ ಪಥದಲೊಂದು ದೀಪದ ಉದಯ..
ಶಾಸ್ರೀಯ ಗಂಧ,ಸಹಸ್ರ-ಕೋಟಿ ಜೀವಭಂಡಾರ-
ಸದ್ಭಾವಗುಡಿ ಈ ನಮ್ಮ
ಸಿರಿಗನ್ನಡ ನಾಡಿಗಿದೋ ನುಡಿ ನಮಸ್ಕಾರ.||

—- ರಚನೆ: ರಾಘವೇಂದ್ರ ಹೆಗಡೆ ಕತಗಾಲ.

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 04/02/2010, in ಹನಿಹರವು (ಕವಿತೆ). Bookmark the permalink. 2 ಟಿಪ್ಪಣಿಗಳು.

  1. “think GLOBAL act LOCAL” so wishes to you popularizing THE GREATE KANNADA.

    Like

ಹೇಗಿದೆ ಹೇಳಿ!