Monthly Archives: ಜೂನ್ 2011

ಹನಿ ಹೊತ್ತು ..


ಮೊಳೆತ ಹಾಗೆ ಮೊರೆವ ನೀರು
ಬೆಳೆತ ಬೆಳೆತ ಕೊರೆವ ಬೇರು
ಕನಸ ಹಾಗೆ ನೆಲದ ಹೂವು
ಮತ್ತೆ ಹುಟ್ಟು ಎಲ್ಲೊ..

****

ಮಳೆಯ ಮೇಲೆ ಮೇಘಗಡಲು
ಹನಿ ಹಾಯಿಸಂಕ ಸುಡಲು
ಕುಸಿದ ಪಾಗಾರ ಕಲ್ಲ ದಾರಿ
ಗುರುತ ಅಲ್ಲೋ ಮತ್ತೆಲ್ಲೊ..

****

ಹೊತ್ತು ಹೊತ್ತು ಸಾಗಿದಂತೆ
ಭಾರ ಸ್ವಲ್ಪ ಮಾಗಿದಂತೆ
ಕೊಡೆಯ ಬಸಿವ ಹುಂಡು ಹುಂಡು
ಕಡಲ ಸೆಲೆಗೊ, ಮಣ್ಣ ಕುಡಿಗೊ..

****

ಮೊನ್ನೆ ನಿನ್ನೆಗಳ ಇತಿಹಾಸದಲಿ
ಇದ್ದ ಹನಿಯೆ
ಇಂದು ನಾಳೆಗಳ ಸಾಂಭಾವ್ಯದಲಿ
ಮರುಹುಟ್ಟಿ
ಉರುಳುತದೆ
ಮತ್ತೆ ಹೊತ್ತುಹೊತ್ತಿಗೆ
ಹನಿ ಹೊತ್ತು ಸಾಗುತದೆ
ಕೊರಕಲು ದಾರಿ ಮತ್ತೊಂದು ತಿರುವ ಅರಸಿ..

****

— ರಾಘವೇಂದ್ರ ಹೆಗಡೆ

ಹಿನ್ನೀರಂತೆ, ಮುನ್ನೀರಂತೆ.., ಮೊರೆವ ಸಾಗರವಂತೆ


ಚಲಿಸುವ ರೈಲಿನಿಂದ ಕಾಣುವ ಶರಾವತಿ ಹಿನ್ನೀರು, ಕಾರ್ಮೋಡದ ಮೇಲ್ಚಾವಣಿಯೊಂದಿಗೆ..

ಕಡಲ ಒಡಲಿಗೆ ಹನಿ ಶರಾವತಿ

ನೀನು ಹೊಳೆದರೆ ನಾನು ಹೊಳೆವೆನು., ನೀನು ಬೆಳೆದರೆ ನಾನು ಬೆಳೆವೆನು

ನನ್ನ ಹರಣದ ಹರಣ ನೀನು, ನನ್ನ ಮರಣದ ಮರಣವು..

ಮುನ್ನೀರಂತೆ, ಅಪಾರವಂತೆ…. ಮೊರೆವ ಸಾಗರವಂತೆ, ಮರವಂತೆ..

— ರಾಘವೇಂದ್ರ ಹೆಗಡೆ