Category Archives: ಚಿತ್ರ ತೀರ

‘ತೀರದ’ ಚಿತ್ರಗಳು ..

ವರುಷ ಆರು ಹರುಷ ನೂರು..!


‘ರಾ ಗ ನೌ ಕೆ’ ಗೆ ಇವತ್ತಿಗೆ ಆರು ತುಂಬಿತು. ಈ ಪಯಣದಲ್ಲಿ ಸಿಕ್ಕಿ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ನಾನು ಚಿರಋಣಿ.
ಇಲ್ಲಿ ಏನೂ ಬರೆಯದೇ ಅದೆಷ್ಟು ಬೇಗ ವರ್ಷವೊಂದು ಉರುಳಿಹೋಯ್ತಲ್ಲ ಎಂಬ ಖೇದವಿದೆ. ಇಲ್ಲಿ ಬಂದು ಹೋಗದಷ್ಟು ಬ್ಯುಸಿ ಆಗಿಬಿಟ್ಟೆನಾ ಅಥವಾ ಸೃಜನಶೀಲತೆಯ ವ್ಯವಧಾನ ಬತ್ತಿ ಹೋಗಿದೆಯಾ ಎಂಬೆಲ್ಲ ಯೋಚನೆಗಳು ಆಗಾಗ ಬಂದು ಕಾಡುವುದಿದೆ.

to blog
ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಸದಾ ಇರಲಿ ಎಂಬುದೊಂದೇ ಈ ಹೊತ್ತಿನ ಅರಿಕೆ.

–ರಾಘವೇಂದ್ರ ಹೆಗಡೆ


ಇವುಗಳನ್ನೂ ನೋಡಿ:

ಮೋಡದ ಮೇಲೊಂದು ವರ್ಷದ ನಡಿಗೆ..

ಒಂದು, ಎರಡು..

ಮೂರು..

ಭ್ರಮೆ ಮತ್ತು ಕವಿತೆ

ವರ್ಷ ಐದಾಯ್ತು!


ವರ್ಷ ಐದಾಯ್ತು!


shot from aghanashini bridge

ಡಿಸೆಂಬರ್ ೩ ಕ್ಕೆ ‘ರಾ ಗ ನೌ ಕೆ’ ಗೆ ಐದು ತುಂಬಿತು! ತಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ 🙂


ಇವುಗಳನ್ನೂ ಓದಿ:

  1. ಮೋಡದ ಮೇಲೊಂದು ವರ್ಷದ ನಡಿಗೆ..

  2. ಒಂದು, ಎರಡು..

  3. ಮೂರು..

  4. ಭ್ರಮೆ ಮತ್ತು ಕವಿತೆ


— ರಾಘವೇಂದ್ರ ಹೆಗಡೆ

ದಣಪೆ ತೆರೆದಷ್ಟೇ ದಾರಿ…

ಸರಗೋಲು


ಕಡಲು ಕಾಣದೇ ಉಳಿದೀತು
ಅಲೆ ಸೋತರೆ
ಯಾವ ಬಾನಿ ಮತ್ತೆ ಜಗಕೆ
ಬಣ್ಣ ಕಟ್ಟೀತು ಮುಗಿಲು
ನೀ ತುಸು ನಕ್ಕರೆ
ಹೆಗಲುಗಳು ಯಾಕೆ
ವ್ಯಕ್ತ ಯುಗಕೆ

ಈಜುವುದು ಮೋಡ
ಬಾನಾಡಿಗಳ ಹಾವಳಿಯಲ್ಲಿ
ಮೀಯುವುದು ಮುಸಲಧರೆ
ಹಸಿಬೆಳಕ ಚಾವಡಿಯಲ್ಲಿ
ತೀರದ ದಾಹದಲಿ
ಹರಿವ ನಾಗಾಲೋಟದಲಿ
ಇರುಳಿನಲಿ ನಸುಕಿನಲಿ
ಒಲೆಯಡಿಯ ಕೆಂಡದಲಿ
ಉಗಿಯ ಹಾಸುವ ಉಸಿರು
ಎಲೆ ಮೊಗ್ಗುಗಳ
ಕಿಡಿ-ಕುಡಿಬಸಿರು

ಹಾಯ್ವ ಹಾದಿಯ ತೆರೆದು
ಕಾಯ್ವ ಕಥನವ ಬರೆದು
ಕಾಲ ಬರಮಾಡುವ
ದೀವಟಿಗೆ ನೀನು
ಸುಳಿಯ ಸಂಚಿಯಲವಿತು
ಹಿಂದೆ-ಮುಂದಕೆ
ಈಜ ಭೃಮಿಸುತಲಿ
ನಡೆವ ಧೂಳು ನಾನು?
—————

— ರಾಘವೇಂದ್ರ ಹೆಗಡೆ

ಮೂರು…


ಒಂದು, ಎರಡು, ಮೂರು…

ಡಿಸೆಂಬರ್ 3ಕ್ಕೆ ‘ರಾ ಗ ನೌ ಕೆ’ಗೆ ಮೂರು ತುಂಬಿತು. 🙂

***

ಕೆ. ಎಸ್ . ನರಸಿಂಹಸ್ವಾಮಿಯವರ ಈ ಸಾಲುಗಳು ಈಗೇಕೋ ನೆನಪಾಗುತ್ತಿವೆ.

ಮತ್ತೆ ಬಂದ ಚೈತ್ರದಲ್ಲಿ
ಮನೆಗೆ ಬಂದ ಹಾದಿಯಲ್ಲಿ
ತಳಿತ ಅದೇ ಮಾವಿನಲ್ಲಿ
ಅದೇ ಹಕ್ಕಿ ಹಾಡಿತು

***

ಬ್ಲಾಗಿಗೆ ಭೇಟಿಯಿತ್ತು ಪ್ರೋತ್ಸಾಹಿಸಿದ ತಮ್ಮೆಲ್ಲರಿಗೂ ಕೃತಜ್ಞತೆಗಳು 🙂

— ರಾಘವೇಂದ್ರ ಹೆಗಡೆ

ಮಳೆ ಮಣ್ಣಿನ ಮೊಗ್ಗು…


Rainy_flower_5

Rainy_flower_6

***

See also :
* Flickr photostream – Raghavendra Hegde

* ಮಳೆ ಎಂಬ ಹನಿವ ಕವಿತೆ..

— ರಾಘವೇಂದ್ರ ಹೆಗಡೆ