ಒಂದಷ್ಟು ಹೈಕುಗಳು .!

ಹಾದಿ
ಗೆ ಎರಡು ಬದಿ
ಒಂದು ಮರಳದ ನಿನ್ನೆ, ಮತ್ತೊಂದು ಮರುಕಳಿಸುವ ನಾಳೆ!

***

ತಡೆಯ
ಲಾಗದಷ್ಟು ಸೆಳೆತ ಸುಳಿಯ
ದೇ ಹೋದರೂ ತೆರೆ ತಡಿಯಸನಿಹ!

***

ಜೊತೆಗೇ ಹರಿದು
ಬಿಡುವಾ ಎಂದು
ಬಂದ ಕವಿತೆ ಈಗ ಶಬ್ಧಬಂಧಿ!

***

ದಡದಿ ನೆಗೆ
ದು ಹಿಮ್ಮುಖ ಹೊರಟೇ ಕವಿತೆಗೆ
ಅಲೆಸೆಳೆವ ಕಾಂತಶಕ್ತಿ!

***

ಬೆಟ್ಟ-ಬಯಲ
ಗುಂಗಲ್ಲೇ ಹರಿದ ಹೊಳೆಸಾಲ
ಭರತವೇರಿದ್ದು ತೀರ ಸಹಜ ಬಿಡಿ!

***

— ರಾಘವೇಂದ್ರ ಹೆಗಡೆ

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 29/11/2011, in ಹನಿಹರವು (ಕವಿತೆ), ಹಾಯ್ಕು and tagged , , , , , , , , . Bookmark the permalink. 7 ಟಿಪ್ಪಣಿಗಳು.

  1. ಸುಂದರ ಸಾಲುಗಳು ರಾಘವೇಂದ್ರ.
    ಮೊದಲನೆಯದಂತೂ ತುಂಬಾ ಅರ್ಥಪೂರ್ಣ

    Like

  2. ಚೆನ್ನಾಗಿದೆ ಹೈಕುಗಳು 🙂 ಮೊದಲ ಅಥವಾ ಮೊದಲೆರೆಡು ಸಾಲುಗಳಲ್ಲಿ ಬಂದ ದಿಸೆ/ಅರ್ಥಕ್ಕೆ ವಿರುದ್ದವಾದ ನಿಲುವನ್ನೋ/ಸತ್ಯವನ್ನೋ ಎತ್ತಿ ತೋರಿಸುವಂತಹ ಹೈಕುಗಳನ್ನ(೪ ಸಾಲು) ಓದಿದ್ದೆ ಸ್ವಲ್ಪ.. ನೀವು ಬರೆದಿರೋದು ಮೂರೇ ಸಾಲುಗಳಲ್ಲಿ.. ಈ ತರದ್ದು ಮೊದಲ ಬಾರಿ ಓದ್ತಾ ಇರೋದು. ಚೆನ್ನಾಗಿದೆ 🙂

    Like

  3. @ ವೇಣುವಿನೋದ್
    ನಮಸ್ತೆ ಸರ್, ತಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು..:)
    ಬರುತ್ತಿರಿ.. 🙂
    @ ಪ್ರಶಸ್ತಿ
    ಇಂತಹವುಹಳು ಜಪಾನೀ ಸಾಹಿತ್ಯದಲ್ಲಿ ಜಾಸ್ತಿ ಸಿಗುತ್ತವೆ. ‘ಹೈಕು’ ಆ ಬಗೆಯ ಪ್ರಾಕಾರ.
    ಧನ್ಯವಾದ ಬರಿತ್ತಿರಿ.. 🙂

    Like

  4. ಜೊತೆಗೇ ಹರಿದು
    ಬಿಡುವಾ ಎಂದು
    ಬಂದ ಕವಿತೆ ಈಗ ಶಬ್ಧಬಂಧಿ!
    Super. wonderful thought.
    Swarna

    Like

ಹೇಗಿದೆ ಹೇಳಿ!