ಭ್ರಮೆ ಮತ್ತು ಕವಿತೆ

ಹರಿಯಲಿಲ್ಲ ಕವಿತೆ
ಕಡಲು ಕನವರಿಸಿದಂತೆ ತಟವ
ಬರೆಯಲಿಲ್ಲ ಕನಸು
ಭ್ರಮೆ ಸೆರೆಯೊಡೆದಂತೆ ಜೀವ

ಈಗ ಹರಿದ ಕಾಗದದ ಎದೆಗಂಟಿದ ದೋಣಿಗೆ
ನೆರೆ ಮಾರುತಗಳ ಭೀತಿಯಿಲ್ಲ
ಮತ್ತೆ ಮತ್ತೆ ಇಬ್ಬನಿಯಲಿ
ಕಾಣುತ್ತದೆ ರಾತ್ರಿ
ಭವಿತವ್ಯದ ಬೆಳಕಿಗೆ
ಇಲ್ಲಿಯ ಕತ್ತಲಿನದೇ ಚಿಂತೆ

ಈಗೂ ಕಂಪ ಪಸರುತ್ತಿದೆ
ಬೋಳು ಸಂಪಿಗೆ ಮರ
ನಭ ನೀಲಿಗಳ ಮೀರಿ
ದಿನ ಹಾಯುತಿದೆ ಚರ

ಒಡೆದು ಹೋಗಲಿ ಕಣ್ಣೀರ ಹನಿ
ಈ ಪಾಪನಾಶಿನಿ ನೀರಲ್ಲಿ
ಕರಗಿ ಉದುರಲಿ ಮೋಡ
ಎದೆಯ ಗಂಧ ಗಾಳಿಯಲ್ಲಿ;
ಹಾರಿ ಗೆಲ್ಲಬಹುದು ಬಾನಾಡಿ
ಪಂಜರದ ಒಂಟಿತಂತಿ
ಸುಪ್ತಸ್ವರವ ಮೀಟುವಲ್ಲಿ..

***

ರಾ ಗ ನೌ ಕೆ‘ಗೆ, ಡಿಸೆಂಬರ್ 3ಕ್ಕೆ ನಾಲ್ಕು ವರ್ಷ ತುಂಬಿತು. 🙂

ತಮ್ಮೆಲ್ಲರ ಪ್ರೋತ್ಸಾಹ ಸದಾ ಹೀಗೇ ಇರಲಿ 🙂

24

— ರಾಘವೇಂದ್ರ ಹೆಗಡೆ

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 06/12/2013, in ಬ್ಲಾಗ್ ಕುರಿತು, ವಿಶೇಷ, ಹನಿಹರವು (ಕವಿತೆ) and tagged , , , , , . Bookmark the permalink. 2 ಟಿಪ್ಪಣಿಗಳು.

ಹೇಗಿದೆ ಹೇಳಿ!