ದಿನದಿನವು ಹೊಸತಹುದು..

ದಿನದಿನವು ಹೊಸತಹುದು,
ದಿನದಿನವು ಹಳತಹುದು
ಹೊಸತದುವೆ ಹಳತದುವೆ
ಭೇದವುಂಟೇನು?
ಇರುವೆನೆಂಬುದು ಹಳಮೆ
ಬರುವೆನೆಂಬುದು ಹೊಸಮೆ
ಒಂದೆಕಾಲದ ಮಾತು
ಹಿಂದೆ ಮುಂದೆ!

ಶಾಲಾದಿನಗಳಲ್ಲಿ ಓದಿದ್ದ ಕವಿತೆಯ ಸಾಲುಗಳಿವು. ’ಇರುವೆನೆಂಬುದು ಹಳಮೆ, ಬರುವೆನೆಂಬುದು ಹೊಸಮೆ’ ಎಂಬ ಸಾಲು, ಮುಂಜಾವಿನ ಸಣ್ಣ ಗಾಳಿಯಲ್ಲಿ, ಧಾವಂತದ ದಾರಿಯಲಿ ಮುಗ್ಗರಿಸಿದಲ್ಲಿ, ತರಚುಗಾಯ ಮಾಡಿಕೊಂಡಲ್ಲಿ, ಗಾಯ ಮಾಗಿ ಕಲೆ ಉಳಿದಲ್ಲಿ, ಒಂದಕ್ಕೊಂದು ಪ್ರತಿಸ್ಪರ್ಧಿಸುವಂತೆ ಓಡೋಡಿ ಮಿಂಚುವ ಗಡಿಯಾರದ ಮುಳ್ಳುಗಳಲ್ಲಿ, ಬಿಸಿಲು-ಮಳೆಯಲ್ಲಿ…. ಹೀಗೆ ಎಲ್ಲೆಂದರಲ್ಲಿ ದಿನದಿನ ಎದುರಾಗುತ್ತ, ಕಾಡಿ ಮನದ ಪುಟಗಳಲ್ಲಿ ಅಚ್ಚಾಗಿಕುಂತಿದೆ. ಆದರೆ ಅದನ್ನು ಬರೆದ ಕವಿಯ ಹೆಸರು ಸ್ಪಷ್ಟವಾಗಿ ನೆನಪಿರದುದಕ್ಕೆ ಬೇಸರವಿದೆ.

****

ನಾಳೆಯಿಂದ ಹೊಸ ಕ್ಯಾಲಂಡರ್ ವರ್ಷ. ಗೋಡೆಯ ಮೇಲೆ ನೇತುಹಾಕಿಟ್ಟ ದಿನದರ್ಶಿಕೆ ನಿವೃತ್ತವಾಗಿ ಮತ್ತೊಂದು ಆವರ್ತನಕೆ ಸಜ್ಜಾಗಿದೆ. ವರ್ಷಗಳಿಂದ ಅಂಟಿಕೊಂಡ ಧೂಳು ಗಂಟು ಬಿಡಿಸಿದಂತೆ ಮುಕ್ತವಾಗುತ್ತಿದೆ….

ಇರುಳು ಅಸುನೀಗುತ್ತದೆ
ಮುಂಜಾವ ಮರುಹುಟ್ಟಿನೊಂದಿಗೆ
ತೆರೆದುಕೊಳ್ಳಲು..
ಇದು ಮುಗಿಯದ ಕಥೆ-
ಮುಗಿಯುವುದು
ಬದುಕ ಸಾಲುಗಳಷ್ಟೆ..!

ತಮ್ಮೆಲ್ಲರಿಗೂ ಹೊಸ ಕ್ಯಾಲೆಂಡರ್ ವರ್ಷದ(ಕ್ರಿಸ್ತ ವರ್ಷ 2011) ಹಾರ್ದಿಕ ಶುಭಾಶಯಗಳು.

ಶುಭಾಶಯ

— ರಾಘವೇಂದ್ರ ಹೆಗಡೆ

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 31/12/2010, in ಲೇಖನ, ವಿಶೇಷ, ಹನಿಹರವು (ಕವಿತೆ) and tagged , . Bookmark the permalink. 8 ಟಿಪ್ಪಣಿಗಳು.

  1. ನಿಮಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು

    Like

  2. ಆಹಾ… ‘ಕ್ಲಾಸ್ಸು’ ಆಹಾ.. ‘ಮಾಸ್ಸು’
    ಈ ಕವಿತೆ ಯಾರಿಗೆ ದೊರಕಿದರೂ ಚಾನ್ಸು !

    ಆಹಾ.. ‘ಹೆಡ್ಸು’ ಆಹಾ..’ಟೇಲ್ಸು’
    ಟೋಸ್ಸು ಹಾಕದೆ ಹೇಳಬಹುದು ಈ ಕವಿತೆ ಬೆಸ್ಟು !!

    ೧೦ ಆದ ನಂತರ ೧೧ ಆಗದ
    ‘ರೆಡ್ ಕಾರ್ಪೆಟ್’ ಹಾಕಿ ೨೦೧೧ ಕ್ಕೆ ಸ್ವಾಗತಿಸಬಹುದಾದ ಕವಿತೆಯ ಹಾಗಿದೆ ಈ ಕವಿಯ ಬರಹ !!!

    Like

ಹೇಗಿದೆ ಹೇಳಿ!