ದಾರಿ ಕೂಡುವ ಬುಡಕೆ..

ಮೋಡದ ಆವರ್ತನಕೆ
ಕಡಲು ಪೊರೆಯೊಡೆವಂತೆ
ಉಸಿರ ಜ್ವಾಲೆಗೆ ಹನಿವ ಮಳೆಹನಿ ನೀನು

**

ಬಾನ ಮಂಟಪದಲ್ಲಿ
ಘಮಿಪ ಹೂ ಪಕಳೆಯ ಚೆಲ್ಲಿ
ಚಿತ್ತಭಿತ್ತಿಗೆ ಚಿತ್ತಾರವಾದ ನೀನೇ ರಂಗವಲ್ಲಿ

**

ಅನಂತ ಚುಕ್ಕಿ ಬಟ್ಟಲೊಳಗೆ
ಮೊಗೆದಷ್ಟೂ ತೀರದ
ನಿನ್ನ ಮೊಗದ ನಗುವದು ಮುಗಿಯದ ಕವಿತೆ

**

ಒಲವ ಕಿಡಿ ಹಚ್ಚಿದ ಬಿಸಿಗೆ
ನಿನ್ನ ನೋಟದ ಬೆಚ್ಚನೆಯ ಬೆಸುಗೆ
ಬಾನಾಡಿ ನುಲಿದಂತೆ ನಿನ್ನ ಒಲುಮೆ

**

ದಾರಿ ಕೂಡುವ ಬುಡಕೆ
ನಿನ್ನ ಹೆಜ್ಜೆ ಗುರುತಿನ ಹೊದಿಕೆ
ಬರೆಯಬೇಕಿಲ್ಲ ಮತ್ತೆ ಧರೆಯ ಸೊಬಗು

**

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 20/09/2016, in ಹನಿಗವನ, ಹನಿಹರವು (ಕವಿತೆ), ಹಾಯ್ಕು and tagged , , , , . Bookmark the permalink. 1 ಟಿಪ್ಪಣಿ.

ಹೇಗಿದೆ ಹೇಳಿ!