ತೂಫಾನ್

ಮೂರು ದಾರಿಗೋ
ನೂರು ಕಲ್ಲ ಕೊರೆತ
ಬೊಗಸೆ ಬೊಗಸೆಗೆ
ನಾಳೆಯ ಚೆಂದ ಸಂಗತ

ದಾರಿ ತೋರಲೂ, ಧಗಧಗಿಸಲೂ
ಸಾಕಾದ ಒಂಟಿಕಿಡಿ
ದಡದಿ ಮೂರೆಲೆಗೆ
ಉಸಿರ ಹಾಸುವ ಜಂಟಿಸುಳಿ

ನಿಂದು ಅಳತೆ ಬುದ್ದಿ
ನಾನೋ ವ್ಯಕ್ತ ಅಗೋಚರ
ನನ್ನ ಮೌನ ನಿನಗೆ ಉಪೇಕ್ಷೆ
ಓದಿ ಮರೆತೆಯಾ ಸಿದ್ದಾಂತ ಸಾಪೇಕ್ಷೆ?

ನಾನು ನಿಶ್ಚಲ, ನಾನು ನಿಶ್ಚಿತ
ನಾನು ನಿರಂತರ, ನಾನು ಸರ್ವಾಂತರ
ನೀ ಕಲಿತ ಭೌತಶಾಸ್ತ್ರದ
ವೇಘೋತ್ಕರ್ಷದಷ್ಟೇ ಅಲ್ಲ
ಸ್ಥಿತ್ಯಂತರಿಸಿ ಗತ್ಯಂತರಿಸಿ ಬರುವ
ನಾನು ಅಖಂಡ ಪ್ರಚನ್ನ ಅವತಾರ

ವರ್ತಮಾನದ ಭವಿಷ್ಯ ನಿರ್ಮಾಣ
ಭೂತ-ವರ್ತಮಾನಗಳ ನಿರ್ವಾಣ
ನಿನ್ನ ಆಟ ಯಾವ ಅಂಕೆ?

ನಾ ಸೋತಿರಬಹುದು,
ಈ ಕ್ಷಣ ಸತ್ತಿರಲೂಬಹುದು
ಆದರೆ ನೆನಪಿಡು
ನಾನು ಅವ್ಯಕ್ತ-ಸುಪ್ತ-ಲಿಪ್ತ
ಇರುಳ ಕಡೆದೋ
ಎಸಳ ನಾಭಿ ಸೀಳೋ
ಧೂಳ ಕಣ ಒಡೆದೋ
ಮತ್ತೆ ಮರುಹುಟ್ಟಿ
ಪುಟಿದೆದ್ದು ಬರುತ್ತೇನೆ ನೋಡು!

***

— ರಾಘವೇಂದ್ರ ಹೆಗಡೆ

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 21/04/2012, in ಹನಿಹರವು (ಕವಿತೆ) and tagged , , , , , , , , , , , , , , , , , , , , . Bookmark the permalink. 8 ಟಿಪ್ಪಣಿಗಳು.

  1. chennagide…saalugaLu chintanege hachchuttave

    Like

  2. @ Sachin : Thank you 🙂

    @ ವೇಣುವಿನೋದ್ ಸರ್ : ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ. ಆಗಾಗ ಈ ಕಡೆ ಬರುತ್ತಿರಿ . 🙂

    @ ಸುಖೇಶ್ ಸರ್, @ ಪ್ರಮೋದ್ ಸರ್, @ ರಂಜಿತ್ ಸರ್
    ಈ ಕವಿತೆಯನ್ನು ಲೈಕಿಸಿದ್ದಕ್ಕೆ ಧನ್ಯವಾದಗಳು! 🙂

    Like

  3. ಇರುಳ ಕಡೆದೋ
    ಎಸಳ ನಾಭಿ ಸೀಳೋ
    ಧೂಳ ಕಣ ಒಡೆದೋ
    ಮತ್ತೆ ಮರುಹುಟ್ಟಿ
    ಬರಲಿ ಆ ಚೈತನ್ಯ .
    ಸುಂದರ ಕವಿತೆ.

    Like

  4. “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ” -ಗೋಪಾಲ ಕೃಷ್ಣ ಅಡಿಗ

    Like

ಹೇಗಿದೆ ಹೇಳಿ!