ಬೆಳಕ ಹಬ್ಬಕ್ಕೊಂದು ಭಾವಗೀತೆ

 

ಭರವಸೆಯ ಬೆಳಕೆ, ಜ್ಞಾನಸಿರಿ ಬೆಳಕೆ
ಜಗತುಂಬಿ ಅರಳು ಬಾ ಬೆಳಕೆ
ಮುನ್ನಡೆಸು ಜಗವ ಸನ್ಮಾರ್ಗ ಪಥಕೆ.

ಭಾವಕೆ ಮೀರಿದ ಭಾವದ ಗುಚ್ಚ
ವಿಶ್ವವ ಮೀರಿದ ಚುಕ್ಕಿಯ ಕಳಶ
ಜೀವಾಭ್ಯುದಯ, ಭಾವಾಭ್ಯುದಯ
ಹೊನ್ನ ಹೊಳಪಿನ ಮಂಗಳ ದೀಪದುದಯ..
ಜ್ವಾಲೆಗೆ ತಣಿವ, ನೆರಳಿಗೆ ದಿಶೆಯ
ಹರಸುವ ಶಿಲ್ಪದ ಪ್ರಭೆಯು ನೀ
ಬಾ ಬೆಳಕೆ ಇರುಳಳಿಸಿ..

ಹಾದಿಯ ಕುರುಹಿನ ಗುರುತಿನ ಫಲಕ
ಅಂತಃಕರ್ಣ ಸ್ಪರ್ಶಿ ಅಂತರಂಗ ತಿಲಕ
ಮೆಲ್ಲನೆ ಓಡುವ ಕಾಲದ ಮಾರ್ದನಿ
ಇರುಳನು ಅಳಿಸಲು ಬೆಳಗುವ ನೀ ದನಿ
ಜೀವದ ಹಸಿರು, ಭಾವದ ಉಸಿರು
ಕಾಯುವ ಶಕ್ತಿಯ ಶಕ್ತಿ ನೀ
ಬಾ ಬೆಳಕೆ ಅವತರಿಸಿ..

*****

ದೀಪಾವಳಿಯ ಹಾರ್ದಿಕ ಶುಭಾಶಯಗಳು.

— ರಾಘವೆಂದ್ರ ಹೆಗಡೆ

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 06/11/2010, in ವಿಶೇಷ, ಹನಿಹರವು (ಕವಿತೆ) and tagged , , , , , , . Bookmark the permalink. 4 ಟಿಪ್ಪಣಿಗಳು.

  1. good bhaavageete .. blog and poems are nice.. keep up the good work…. 🙂

    Like

  2. ಅದ್ಭುತ. ಪದ ಪೋಣಿಸುವಿಕೆ ಅದ್ಭುತ

    Like

  1. ಮರುಕೋರಿಕೆ (Pingback): ರಥಬೀದಿ… « ರಾ ಗ ನೌ ಕೆ

ಹೇಗಿದೆ ಹೇಳಿ!