ಮೋಡದ ಮೇಲೊಂದು ವರ್ಷದ ನಡಿಗೆ..

“ಅಲೆಯುತ ಅಲೆಗಳ ಮೇಲೆ, ಬರೆಯುತ ಭಾವದ ಓಲೆ” ಎಂಬ ಒಕ್ಕಣೆಯೊಂದಿಗೆ ಆರಂಭಗೊಂಡು, ಅಳುಕುತ್ತಲೇ “ಭಾವಕಡಲಲ್ಲಿ ಒಂದು ಮೌನಯಾನ” ಹೊರಟು, “ಬರಲಿ ಮೆಲ್ಲನೆ ಗಾಳಿ, ಬಿರಿಯದಂತೆಯೆ ಮನದ ದೋಣಿ” ಎಂದು ಪ್ರಾರ್ಥಿಸುತ್ತ, ಕ್ಷಣ ಕ್ಷಣಕ್ಕೂ ಯಾತ್ರೆಯಲ್ಲಿ ಏಕಾಂತವ ಕದಡುವ, ತುಮುಲವುಂಟುಮಾಡುವ ಅಲೆಗಳ ಭೋರ್ಗರೆತದಿಂದ ಸಾಂತ್ವನಿಸಿಕೊಳ್ಳಲು “ದೂರವಾದರೂ ದಡ, ಭಾರವಾಗದಿರಲಿ ಹೃದಯ..” ಎಂಬ ಸ್ಪೂರ್ತಿಯುಕ್ತಿಯ ಸ್ತುತಿಸುತ್ತ, ಮನದ ಕಡಲಲ್ಲಿ ಮತ್ತು ಭಾವನೆಗಳ ಮೋಡದ ಮೇಲೆ ತೇಲುತ ಹೊರಟದ್ದು ರಾ ಗ ನೌ ಕೆ. ಹೀಗೆ ರಾಶಿ ರಾಶಿ ಪಂಕ್ತಿಯಲಿ ಭಾವಗಳ ಗರಿಬಿಚ್ಚಿ ಮನದ ನೌಕೆಯನೇರಿ ಅಭಿಯಾನ ಹೊರಟ ಕೆಲ ಅಲೆಗಳು ಉಸುರಿದ್ದು ಈ “ರಾ ಗ ನೌ ಕೆ”.

ಕವಿತೆಗಳನ್ನು ಮತ್ತು ಕವಿತೆಗಳ ಹಾಗೆ ಒಂದಷ್ಟನ್ನು ಗೀಚಿ ಹರಿದುಬಿಡುತ್ತಿದ್ದ ನಾನು, ಈ ಬ್ಲಾಗು ಲೋಕದಲ್ಲಿ ಯಾರೊಬ್ಬರ ಪರಿಚಯವೂ ಇರದೇ ಮತ್ತು ಅಸಲಿಗೆ ಇಂತವುಗಳ ಅಸ್ತಿತ್ವದ ಬಗ್ಗೆ ಎಳ್ಳಷ್ಟೂ ಅರಿವಿರದೆ ಇಲ್ಲಿಗೆ ಅಭ್ಯಾಗತನಾಗಿ ಬಂದದ್ದು ತೀರ ಆಕಸ್ಮಿಕವಾಗಿ. ಇಲ್ಲಿ ಹೆಚ್ಚಾಗಿ ನಾನು ಕವಿತೆಗಳನ್ನೇ ಬರೆದಿದ್ದೇನೆ ಮತ್ತು ಅವುಗಳ ವಿಭಾಗಕ್ಕೆ “ಹನಿ ಹರವು” ಎಂದು ನಾಮಕರಿಸಿದ್ದೇನೆ.

*****

ಅಕ್ಷರಗಳ ಸಂತೆಯಲಿ
ಬರಿ ನೆಪಮಾತ್ರನಾಗಿ ನಾನು
ಯುಕ್ತ ಪದಗಳನೆಲ್ಲ ಬಾಚಿ
ಹಿಡಿಯಹೋದೆ..
ತಪ್ತ ಪದಗಳ ಮರೆತು
ದುಃಖಿಸುತ ಸುಪ್ತವಾದವುಗಳ ಕುರಿತು,
ಬರಿಯ ಹಾಳೆಯೊಳಗೆಯೆ ಮುಳುಗಿ
ಅವುಗಳಿಗೇ ನಾ ಬೇಡವಾದೆ.!
ಬಂದ ನಾಲ್ಕು ಸಾಲನು
ಗೀಚುವಷ್ಟರೊಳಗೆಯೆ
ಒತ್ತರಿಸಿ ಬಂದು ನೆನಪೊಳು ನಿಲುಕದೆ
ಸಾವನಪ್ಪಿತು ಮುಂದಿನ ಸಾಲು..
ನೆನಪಿಸುತ ಶೀರ್ಷಿಕೆಯ
“ಅನಿಶ್ಚಿತತೆ ಎಂಬ ಕವಿತೆ;
ಕವಿತೆ ಎಂಬ ಅನಿಶ್ಚಿತತೆ..!”

*****

ಮನಸ್ಸಿನ ಬಗೆಬಗೆಯ ಬಣ್ಣಗಳಾದ ಗೊಂದಲ, ತಳಮಳ, ಹೇಳಬೇಕೆಂದುಕೊಂಡ ಅಥವಾ ಹೇಳಲಾಗದೇ ನುಂಗಿಕೊಂಡ ವಾಂಛೆ, ತದಾಮ್ಯತೆ, ಏಕಾಂತ, ಮೌನ, ನೋವು, ಹತಾಶೆ, ದುಃಖ, ಶಾಂತ, ತಪ್ತ, ನಗು, ಖುಶಿ,…. ಇವುಗಳೆಲ್ಲ ಹದವಾಗಿ, ಮತ್ತೊಮ್ಮೊಮ್ಮೆ ಉದ್ವೇಗದ ರಾಡಿಯಾಗಿ, ಹೃದಯ ಮನಸುಗಳ ಮೂಲಕ, ಪದಗಳ ರೂಪದಿ ಸೃಜಿಸಲ್ಪಟ್ಟಾಗ ಕವಿತೆ, ಕತೆ ಅಥವಾ ಭಾವಗಳ ಗುಚ್ಚವಾಗಿಸುವ ಪ್ರಯತ್ನದ ಇನ್ನಾವುದೇ ಪ್ರಾಕಾರದ ಬರವಣಿಗೆ ಹುಟ್ಟುತ್ತದೆ; ಮರುಕ್ಷಣ ಮನಸ್ಸಿಗೆ ಒಂದಷ್ಟು ನಿರಾಳವ ನೀಡುತ್ತದೆ, ಅಲ್ಲದೇ ಮನಸ್ಸು ಹರಿವ ನೀರಿನಂತಾಗಲೂ ಸಹ ಇದು ಸಹಕಾರಿಯಾಗುತ್ತದೆ ಎಂಬುದು ನನ್ನ ಭಾವ. ಅಂತೆಯೆ ಈ ಬ್ಲಾಗ್..
ನನ್ನ ಬರಹಗಳನ್ನು ಓದಿ ಪ್ರತಿಕ್ರಿಯಿಸಿದ ಮತ್ತು ಪ್ರತಿಕ್ರಿಯಿಸದೇ ಓದಿದ ಪ್ರತಿಯೊಬ್ಬರಿಗೂ ನನ್ನ ಕೃತಜ್ಞತೆಗಳು. ‘ರಾ ಗ ನೌ ಕೆ’ ಪಯಣ ಆರಂಭವಾಗಿ ಇಂದಿಗೆ ಒಂದು ವರ್ಷ. ಈ ಅಭಿಯಾನಕ್ಕೆ ತಮ್ಮ ಆಶೀರ್ವಾದ ಮತ್ತು ಪ್ರೋತ್ಸಾಹ ಸದಾ ಇರಲಿ.

— ರಾಘವೇಂದ್ರ ಹೆಗಡೆ.

*****
ಅಂದಹಾಗೆ ಮೇಲಿನ ಚಿತ್ರಗಳೆಲ್ಲ ಕೊಡಚಾದ್ರಿಯ ಕೆಲ ವಿಹಂಗಮ ನೋಟಗಳು. ಶಂಕರಾಚಾರ್ಯರ ತಪೋಭೂಮಿ, ಮೂಕಾಂಬಿಕೆಯ ಆಸ್ಥಾನ, ಸಂಜೀವಿನಿಯ ನೆಲೆ, ಸುಪ್ರಸಿದ್ದ ಪ್ರವಾಸಿ ತಾಣ, ಕರ್ನಾಟಕದ ಮುಕುಟಗರಿ, ಸಹ್ಯಾದ್ರಿಯ ಮೇರು ’ಕೊಡಚಾದ್ರಿ’ ಯ ಕುರಿತು ಬಹಳದಿನಗಳಿಂದ ಬರೆಯಬೇಕೆಂದುಕೊಂಡಿದ್ದೆ. ಇವು ಅಲ್ಲಿನ ಕೆಲ ಚಿತ್ರಗಳಷ್ಟೆ. ಮುಂದೆಂದಾದರೂ ಇದರ ಕುರಿತು ವಿವರವಾಗಿ ಬರೆಯುತ್ತೇನೆ.
*****

— ರಾಘವೇಂದ್ರ ಹೆಗಡೆ.

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 03/12/2010, in ಚಿತ್ರ ತೀರ, ಬ್ಲಾಗ್ ಕುರಿತು, ಹನಿಹರವು (ಕವಿತೆ) and tagged . Bookmark the permalink. 19 ಟಿಪ್ಪಣಿಗಳು.

  1. Nice Sir…. Good Writing..
    May Raganouke journey continue for Life……. 🙂

    Regards
    Santosh

    Like

  2. ನಿಮ್ಮ ಬ್ಲಾಗ್ ಪಯಣ ಹೀಗೆ ಸತತವಾಗಿ ಮುಂದುವರಿಯಲಿ. ನಿಮ್ಮಲ್ಲಿರುವ ವಿದ್ಯೆಯಾದ ಇಂಜಿನಿಯರಿಂಗ್ ಕುರಿತೂ ಕನ್ನಡದಲ್ಲಿ ಬರೆಯಿರಿ

    Like

  3. Hi Raghu..,
    I am not jst sayng your blog is nice..
    The contents of your blog are really nice..
    Good writing.. Keep it up 🙂

    Like

  4. “ಇಲ್ಲಿಯ ಕವಿತೆಗಳು ಚೆನ್ನಾಗಿಲ್ಲ. ಕವಿತೆಗಳು ಅಂದ್ರೆ ಬರಿ ಅಕ್ಷರಗಳ ಮೆರವಣಿಗೆ ಅಲ್ಲ . ಅದು ಅಕ್ಷರ ರೂಪದಲ್ಲಿ ಭಾವನೆಗಳ ಮೆರವಣಿಗೆ. ಇದಕ್ಕೆ ತುಂಬ ವರ್ಷಗಳ ಅನುಭವ ಬೇಕು .”
    ಇದು ಸಾಮಾನ್ಯವಾಗಿ ಒಂದು ವರ್ಷ ಕಳೆದ ಕವಿಗಳ ತಾಣಗಳಿಗೆ ಬರುವ ಸಾಮಾನ್ಯ ಪ್ರತಿಕ್ರಿಯೆಗಳು.
    ಆದರೆ ಇದಕ್ಕೆ ಅಪವಾದ ಎಂಬಂತೆ ಇಲ್ಲಿಯ ಕವಿತೆಗಳು ಮುಂದಿನ ವರ್ಷಗಳ ಅನುಭವವನ್ನು ಗಳಿಸಿಗೊಂಡು ಬರೆದಂತಹ ಸುಂದರ ಕವಿತೆಯ ಹಾಗಿದೆ ಮತ್ತು ಆಗಿವೆ . ವಯಸ್ಸು,ಆಯಸ್ಸು ಇಲ್ಲದ ಕವಿತೆಗಳ ವರ್ಷದ ಆಚರಣೆ ಅಸಮಂಜಸ. ಆದರೆ ಕವಿಯ ಯಶಸ್ಸಿನ ಖುಷಿ ಸಮಂಜಸ.
    ಹಾರ್ದಿಕ ಶುಭಾಶಯಗಳು-ಪ್ರತಿ ದಿನ, ಪ್ರತಿ ಕ್ಷಣ .

    Like

    • ನಮಸ್ತೆ ಪವನ್
      .,
      ನಿಜ,
      ವಯಸ್ಸು,ಆಯಸ್ಸು ಇಲ್ಲದ ಕವಿತೆಗಳ ವರ್ಷದ ಆಚರಣೆ ಅಸಮಂಜಸ..
      ಏನೋ ನನಗೆ ತಿಳಿದ ಮಟ್ಟಿಗೆ ಕವಿತೆಗಳನ್ನು ಮತ್ತು ಕವಿತೆಗಳ ಹಾಗೆ ಒಂದಷ್ಟನ್ನು ಇಲ್ಲಿ ಗೀಚಿದ್ದೇನೆ.
      ಇಲ್ಲಿನ ಹೆಚ್ಚಿನವೆಲ್ಲ ಮನದ ಭಾವನೆಯ ಕೆಲ ಬಣ್ಣಗಳಷ್ಟೇ.
      ನನ್ನ ಬಹುತೇಕ ಎಲ್ಲ ಬರಹಗಳನ್ನೂ ತಾವು ಓದಿದ್ದೀರಿ, ಪ್ರತಿಕ್ರಿಯಿಸಿದ್ದೀರಿ.
      ತಮಗೆ ನನ್ನ ಕೃತಜ್ಞತೆಗಳು.. 🙂

      Like

  5. ಹಾರ್ದಿಕ ಶುಭಾಶಯಗಳು…… i wish raganouke journey continues like this…. 🙂

    Like

  6. ಆಹಾ..!! ಸುಂದರ ಕವಿತೆ. ಹೀಗೆ ಮುಂದುವರಿಸಿ..

    Like

  7. ರಾಗನೌಕೆಯ ಪಯಣ ನಿರಂತರವಾಗಿರಲಿ.

    Like

  8. “ಅನಿಶ್ಚಿತತೆ ಎಂಬ ಕವಿತೆ;
    ಕವಿತೆ ಎಂಬ ಅನಿಶ್ಚಿತತೆ..!”
    adhbuta Raghu, inthaha tumba simple hage kanuva shabdhagalannu balasikonda reeti tumba kushi kodatte… shubhavagali…

    Like

  1. ಮರುಕೋರಿಕೆ (Pingback): ರಾ ಗ ನೌ ಕೆ – 2010 in review « ರಾ ಗ ನೌ ಕೆ

  2. ಮರುಕೋರಿಕೆ (Pingback): ಮೋಡವ ಹಿಡಿವ ತವಕದಲ್ಲಿ..: ಕೊಡಚಾದ್ರಿ ಚಾರಣ – ಅಂಕಣ ೧ « ರಾ ಗ ನೌ ಕೆ

  3. ಮರುಕೋರಿಕೆ (Pingback): ಒಂದು, ಎರಡು…… « ರಾ ಗ ನೌ ಕೆ

  4. ಮರುಕೋರಿಕೆ (Pingback): ವರ್ಷ ಐದಾಯ್ತು! | ರಾ ಗ ನೌ ಕೆ

  5. ಮರುಕೋರಿಕೆ (Pingback): ವರುಷ ಆರು ಹರುಷ ನೂರು..! | ರಾ ಗ ನೌ ಕೆ

ಹೇಗಿದೆ ಹೇಳಿ!